Friday, April 4, 2025
Google search engine

Homeವಿದೇಶಮೈಕ್ರೋ ಆರ್‌ಎನ್‌ಎ ಆವಿಷ್ಕಾರ: ಅಮೆರಿಕದ ವಿಕ್ಟರ್‌, ಗ್ಯಾರಿಗೆ ನೊಬೆಲ್ ಪ್ರಶಸ್ತಿ

ಮೈಕ್ರೋ ಆರ್‌ಎನ್‌ಎ ಆವಿಷ್ಕಾರ: ಅಮೆರಿಕದ ವಿಕ್ಟರ್‌, ಗ್ಯಾರಿಗೆ ನೊಬೆಲ್ ಪ್ರಶಸ್ತಿ

ವಾಷಿಂಗ್ಟನ್‌: ಅಮೆರಿಕದ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ ಜಂಟಿಯಾಗಿ ಶರೀರಶಾಸ್ತ್ರ ಅಥವಾ ಫಿಸಿಯಾಲಜಿ ವಿಭಾಗದ 2024ರ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ಕರೋಲಿನ್ಸ್ಕಾ ವೈದ್ಯಕೀಯ ವಿಶ್ವವಿದ್ಯಾಲಯ ಘೋಷಣೆ ಮಾಡಿದೆ.

ಜೀವಿಗಳ ಬೆಳವಣಿಗೆ ಹಾಗೂ ಕಾರ್ಯಚಟುವಟಿಕೆಗಳಲ್ಲಿ ಜೀನ್‌ಗಳ ಪಾತ್ರ ಕುರಿತು ಮೂಲ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಈ ಜೋಡಿ ಕಂಡುಹಿಡಿದ ಮೈಕ್ರೋ ಆರ್‌ಎನ್ಎಗೆ ಈ ಪ್ರಶಸ್ತಿ ಲಭಿಸಿದೆ.

ಈ ವಾರ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ನೊಬೆಲ್‌ ಪ್ರಶಸ್ತಿಗಳ ಘೋಷಣೆಯಾಗಲಿದೆ. ಇದೇ ಅಕ್ಟೋಬರ್‌ 9ರಂದು ರಸಾಯನಶಾಸ್ತ್ರ ವಿಭಾಗದ ನೊಬೆಲ್‌ ಪ್ರಕಟಿಸಲಾಗುತ್ತದೆ. ಸಾಹಿತ್ಯ, ಶಾಂತಿ ಮತ್ತು ಆರ್ಥಿಕ ವಿಜ್ಞಾನಗಳ ಪ್ರಶಸ್ತಿ ವಿಜೇತರನ್ನು ಕ್ರಮವಾಗಿ ಅಕ್ಟೋಬರ್ 10, ಅಕ್ಟೋಬರ್ 11 ಮತ್ತು ಅಕ್ಟೋಬರ್ 14 ರಂದು ಘೋಷಿಸಲಾಗುತ್ತದೆ.

ಮೈಕ್ರೋಆರ್‌ಎನ್‌ಎ ಜೀನ್‌ಗಳು 500 ಮಿಲಿಯನ್ ವರ್ಷಗಳ ಕಾಲ ಬಹುಕೋಶೀಯ ಜೀವಿಗಳ ಜೀನೋಮ್‌ಗಳಲ್ಲಿ ವಿಕಸನಗೊಂಡಿವೆ ಮತ್ತು ವಿಸ್ತಾರಗೊಂಡಿವೆ. ಮಾನವರಲ್ಲಿ ಕಂಡುಬರುವ ವಿಭಿನ್ನ ಮೈಕ್ರೋಆರ್‌ಎನ್‌ಎಗಳ ಸಾವಿರಕ್ಕೂ ಹೆಚ್ಚು  ಜೀನ್‌ಗಳಿವೆ ಮತ್ತು ಇವೆಲ್ಲವೂ ಮೈಕ್ರೋಆರ್‌ಎನ್‌ಎಯ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ ಎನ್ನುವುದು ಈ ಆವಿಷ್ಕಾರದಿಂದ ತಿಳಿದುಬಂದಿದೆ ಎಂದು ನೊಬೆಲ್‌ ಸಮಿತಿ ಹೇಳಿದೆ.

RELATED ARTICLES
- Advertisment -
Google search engine

Most Popular