ಮೈಸೂರು: “ ಫಾಲ್ಟ್ ಲೈನ್ಸ್ ಇನ್ ದಿ ಫೈತ್” ಕೃತಿಯ ಕುರಿತು ಚರ್ಚೆಯನ್ನು ಮೈಸೂರು ವಿಶ್ವವಿದ್ಯಾನಿಲಯ (ಹೈಬ್ರಿಡ್ ಮೋಡ್) ವಿಜ್ಞಾನ ಭವನದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳ ವಿಭಾಗದ ಮುಖ್ಯಸ್ಥರು ಮತ್ತು ಸಂಯೋಜಕಿ ಡಾ.ಭಾರತಿ ಹಿರೇಮಠ ಆಯೋಜಿಸಿದ್ದರು.
ಮಹಾರಾಜ ಕಾಲೇಜು ಪ್ರಾಂಶುಪಾಲರು ಎಚ್ ಸೋಮಶೇಖರಪ್ಪ, ಮಹಾರಾಜ ಕಾಲೇಜಿನ ಆಡಳಿತಾಧಿಕಾರಿ ಡಾ. ಷಣ್ಮುಗಂ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಧ್ಯಕ್ಷತೆಯನ್ನು ಸಿಎಸ್ ಐಆರ್-ವಿಶ್ರಾಂತ ವಿಜ್ಞಾನಿ, ಜಪಾನ್ ನ ಹೊಕ್ಕೈಡೋ ವಿಶ್ವವಿದ್ಯಾಲಯದ ರಾಯಭಾರಿ, ಮೈಸೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ ಕೆ ಎಸ್ ರಂಗಪ್ಪ ವಹಿಸಿದ್ದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ನವದೆಹಲಿಯ ಜಾಮಿಯಾ ಹಮ್ದರ್ದ್ ಮಾಜಿ ಪ್ರೊ-ಚಾನ್ಸಲರ್ ಮತ್ತು ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಇಕ್ಬಾಲ್ ಸೈಯದ್ ಹಸನೈನ್ ಕೃತಿ ಕುರಿತು ಮಾತನಾಡಿದರು.
CIWAD-ಭಾರತ ನಿರ್ದೇಶಕ, SIS JNU ಮಾಜಿ ಅಸೋಸಿಯೇಟ್ ಡೀನ್, JNU ನ ಮಾಜಿ ಪ್ರಾಧ್ಯಾಪಕ ಪ್ರೊ ಅಫ್ತಾಬ್ ಕಮಲ್ ಪಾಷಾ, , , ಮಹಾರಾಜ ಕಾಲೇಜು ಅಂತರಾಷ್ಟ್ರೀಯ ಸಂಬಂಧಗಳ ವಿಭಾಗ ಅಧ್ಯಾಪಕರು ಡಾ. ಸಂಘಮಿತ್ರ ಕಲಿತ ಕೃತಿ ಕುರಿತು ಮಾತನಾಡಿದರು.
ಬಳಿಕ ಯುವ ವಿದ್ವಾಂಸರ ಅಧಿವೇಶನ ಹಮ್ಮಿಕೊಂಡಿದ್ದು, ಮಹಾರಾಜ ಕಾಲೇಜು ಅಂತರಾಷ್ಟ್ರೀಯ ಸಂಬಂಧಗಳ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಎಸ್ತರ್ ಗಮಕೋ ಝುಗ್ವೈ, ದೀಪಕ್ ನಾರಾಯಣ ಎಸ್ ಭಾರದ್ವಾಜ್, ಶೆಮೇರಿ ಪೆರೆರಾ, ಪಿಎಚ್‌ಡಿ ಸಂಶೋಧನಾ ವಿದ್ವಾಂಸರಾದ ಅಲಾ ಎಂ ಎಚ್ ನಾಸರ್, ಬೆಂಗಳೂರಿನ NIAS ಪಿಎಚ್‌ಡಿ ಸಂಶೋಧನಾ ವಿದ್ವಾಂಸರು ರೋಹಿಣಿ ರೀನಮ್ ಪಾಲ್ಗೊಂಡಿದ್ದರು.