ಮಂಗಳೂರು : ಮಂಗಳೂರು ವಿವಿ ಕುಲಪತಿ ಸ್ಥಾನಕ್ಕೆ ಹಿರಿಯ ವಿದ್ವಾಂಸ ಪ್ರೊ. ಮುಝಫರ್ ಅಸಾದಿಯವರನ್ನು ಕಡೆಗಣಿಸಲಾಗಿದೆ. ರಾಜ್ಯದ ಹಿರಿಯ ವಿದ್ವಾಂಸರಾದ ಅಸಾದಿಯವರಯವರ ಹೆಸರು ಮಂಗಳೂರು ವಿ.ವಿ ಉಪಕುಲಪತಿ ಸ್ಥಾನಕ್ಕೆ ಮಾತ್ರವಲ್ಲದೆ ಶಿವಮೊಗ್ಗದ ಕುವೆಂಪು ವಿ.ವಿ.ಗೂ ಕೂಡ ಶಿಫಾರಸು ಮಾಡಲಾಗಿತ್ತು.
ಆದರೆ ಅಲ್ಲಿ ಕೂಡ ಅವರಿಗೆ ನೇಮಕಾತಿ ನೀಡಲಿಲ್ಲ. ರಾಜ್ಯದಲ್ಲಿ ೪೦ಕ್ಕೂ ಹೆಚ್ಚು ಸರ್ಕಾರಿ ವಿ.ವಿ.ಗಳ ಕುಲಪತಿಗಳಲ್ಲಿ ಒಬ್ಬರೂ ಕೂಡ ಅಲ್ಪಸಂಖ್ಯಾತ ಮುಸ್ಲಿಮರಿಲ್ಲದಿರುವದು ಇಡೀ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅನ್ಯಾಯ ಎಂದು ಸಯ್ಯದ್ ಅಬ್ದುಲ್ ರಹ್ಮಾನ್ ಬಾಫಾಕಿ ತಂಙಳ್ ಫೌಂಡೇಶನ್ ಕಾರ್ಯದರ್ಶಿ ಇಬ್ರಾಹಿಂ ಕರೀಂ ಹೇಳಿದರು.
ಮಂಗಳೂರಿನ ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ಪ್ರೊ. ಆಸಾದಿಯವರಂತಹ ಹಿರಿಯ ವಿದ್ವಾಂಸರನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತರಾತುರಿಯ ಕುಲಪತಿಯ ನೇಮಕ ಮಂಗಳೂರು ವಿವಿಯಲ್ಲಿ ಇತ್ತೀಚಿಗೆ ನಡೆಯುತ್ತಿರೋ ಅವ್ಯವಹಾರಗಳನ್ನು ಮುಚ್ಚಿ ಹಾಕುವ ಸಂಚು ಎಂಬುದು ಸಂಶಯ ಮೂಡುತ್ತದೆ ಎಂದರು.