ಮಂಗಳೂರು (ದಕ್ಷಿಣ ಕನ್ನಡ): ಹೆದ್ದಾರಿ ಕಾಮಗಾರಿಯಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ತಾಲೂಕಿನ ಲಾಯಿಲ ಇಂಡಸ್ಟ್ರಿಯಲ್ ಎಸ್ಟೇಟ್ ನ ಉದ್ಯಮಿಗಳು, ಸ್ಥಳೀಯರು ಇಂದು ಕಾಶಿಬೆಟ್ಟುವಿನಲ್ಲಿ ಅಗೆದು ಹಾಕಿರುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಕುಳಿತು ತಮ್ಮ ಪ್ರತಿಭಟನೆಯನ್ನು ನಡೆಸಿದರು.
ಕಳೆದ ಒಂದು ತಿಂಗಳಿನಿಂದ ಸಂಕಷ್ಟದಲ್ಲಿರುವ ಇಲ್ಲಿನ ಉದ್ಯಮಿಗಳು ತಮಗೆ ಕನಿಷ್ಟ ರಸ್ತೆಯನ್ನು ಮಾಡಿಕೊಡುವಂತೆ ಹಾಗೂ ತಮ್ಮ ಮಳಿಗೆಗಳಿಗೆ ಕೆಸರು, ನೀರು ನುಗ್ಗದಂತೆ ಮಾಡಿಕೊಡುವ ಬೇಡಿಕೆಯನ್ನು ಜನ ಪ್ರತಿನಿಧಿಗಳ ಮುಂದೆ ಅಧಿಕಾರಿಗಳ ಮುಂದೆ ಇಡುತ್ತಿದ್ದಾರೆ ಆದರೆ ಇವರ ಬೇಡಿಕೆಗಳಿಗೆ ಈವರೆಗೆ ಯಾರೂ ಸ್ಪಂದಿಸದ ಹಿನ್ನಲೆಯಲ್ಲಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಇವರು ರಸ್ತೆಬದಿಯಲ್ಲಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.