ರೈತಾಪಿ ಉತ್ಪನ್ನಗಳನ್ನ, ಸ್ವದೇಶಿ ಪದಾರ್ಥಗಳನ್ನ ಹೆಚ್ಚಾಗಿ ಬಳಸಲು ಯುವಸಮೂಹ ಮುಂದಾಗಿ.
ಮೈಸೂರು:76ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಯಕರ್ನಾಟಕ ಸಂಘಟನೆ ಮತ್ತು ರೈಲ್ವೆ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಟ್ರಸ್ಟ್ ರಮಾಬಾಯಿನಗರ ವತಿಯಿಂದ ಮೈಸೂರು ತಾಲ್ಲೂಕು ಗುರೂರು ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಪಠ್ಯಸಾಮಾಗ್ರಿಗಳನ್ನ ವಿತರಿಸಲಾಯಿತು.
ಜಯಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹೆಚ್.ಎನ್ ಸತೀಶ್ ಗೌಡ ಮಾತನಾಡಿ ಮೈಸೂರು ಚಲೋ ಹೋರಾಟದ ಮೂಲಕ ಮೈಸೂರು ರಾಜ್ಯಕ್ಕೆ ಸ್ವತಂತ್ರ ತಂದುಕೊಟ್ಟ ಆಜಾದ್ ಕಾಂಗ್ರೆಸ್ ಅದರ ಬಗ್ಗೆ ಹೆಚ್ಚಾಗಿ ಇಂದಿನ ಮಕ್ಕಳಿಗೆ ತಿಳಿಸಬೇಕಿದೆ. ರೈತಾಪಿ ಉತ್ಪನ್ನಗಳನ್ನ ಸ್ವದೇಶಿ ಪದಾರ್ಥಗಳನ್ನ ಹೆಚ್ಚಾಗಿ ಬಳಸಲು ಯುವಸಮೂಹ ಮುಂದಾಗಬೇಕೆಂದರು.
ನಂತರ ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ ಮಾತನಾಡಿ ಭರತಪೂರ್ವ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಪಡೆಯಲು ಗಾಂಧೀಜಿ ನೇತಾಜಿ ರವರು ಶಾಂತಿ ಕ್ರಾಂತಿಯ ರೂಪದಲ್ಲಿ ದೇಶದುದ್ದಗಲಕ್ಕೂ ಹೋರಾಟಕ್ಕೆ ಕರೆ ನೀಡಿದಾಗ ಲಕ್ಷಾಂತರ ದೇಶಭಕ್ತರ ಪ್ರಾಣತ್ಯಾಗ ಬಲಿದಾನದಿಂದಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿತು.
ನಮ್ಮ ಮೈಸೂರಿನಲ್ಲೂ ಸಹ ಅಗರಂ ರಂಗಯ್ಯ, ಎಂ.ಎನ್ ಜೋಯೊಸ್, ತಗಡೂರು ರಾಮಚಂದ್ರರಾಯರು, ವೆಂಕಟಕೃಷ್ಣಯ್ಯ ತಾತಯ್ಯ,ಮರಿಯಪ್ಪ, ದಾಸಪ್ಪ, ಖಾದ್ರಿ ಶಾಮಣ್ಣ, ಎಚ್. ಕೆ ಕುಮಾರಸ್ವಾಮಿ, ಶ್ರೀಕಂಠಪ್ಪ, ಟಿವಿ ಶ್ರೀನಿವಾಸರಾವ್, ಶ್ರೀಕಂಠಶರ್ಮ ರಂತವರನ್ನ ಸ್ಮರಿಸಬೇಕು ಮುಂದಿನ ದಿನದಲ್ಲಿ ಮೈಸೂರು ಜಿಲ್ಲಾಡಳಿತ ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ಮತ್ತು ಅವರ ಹೋರಾಟದ ದಿನಗಳ ಬಗ್ಗೆ ಯುವ ಪೀಳಿಗೆಗೆ ತಲುಪಿಸಲು ಹಲವಾರು ಯೋಜನೆಗಳನ್ನ ರೂಪಿಸಬೇಕು ಎಂದರು.
ಜಯಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹೆಚ್.ಎನ್ ಸತೀಶ್ ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿಜಯ ಗೌಡ, ಜಿಲ್ಲಾಧ್ಯಕ್ಷ ಶ್ರೀಧರ ನಾಯಕ, ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಜಯ್, ರೈಲ್ವೆ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಶ್ರೀನಿವಾಸರಾವ್, ಜಿಲ್ಲಾ ಉಪಾಧ್ಯಕ್ಷರಾದ ಕಾಂತರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲಿಂಗರಾಜು, ಪದಾಧಿಕಾರಿಗಳಾದ ಆಶಾ ರಾಣಿ, ಸುರೇಶ್, ಮಂಜುನಾಥ್, ಸ್ವಾಮಿ, ರಾಜು, ರೈಲ್ವೆ ಮಂಜು, ರವಿಕುಮಾರ್, ಶಾಲಾ ಶಿಕ್ಷಕ ವೃಂದ ಹಾಜರಿದ್ದರು,
