ಮಂಗಳೂರು ದಕ್ಷಿಣ ಕನ್ನಡ: ರೋಟರಿ ಸಮುದಾಯ ದಳ ಕಡೇಶಿವಾಲಯ ಮತ್ತು ವಿಜಯ ಗ್ರಾಮೀಣ ಪ್ರತಿಷ್ಠಾನ ಮಂಗಳೂರು ಇವುಗಳ ಆಶ್ರಯದಲ್ಲಿ ವಿಜಯ ಗ್ರಾಮೀಣ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಹೆಗ್ಡೆಯವರ ಅಮೃತ ಹಸ್ತದಲ್ಲಿ ಉಚಿತ ಮಹಿಳಾ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡುವ ಮೂಲಕ ಗ್ರಾಮೀಣ ರೋಟರಿ ಭವನದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಸಭಾಧ್ಯಕ್ಷರಾಗಿ ರೋಟರಿ ಸಮುದಾಯ ದಳದ ಅಧ್ಯಕ್ಷ ಕಿಶೋರ್ ಕುಮಾರ್ ಬಿ, ಅತಿಥಿಗಳಾಗಿ ಬ್ಯಾಂಕ್ ಆಫ್ ಬರೋಡ ಕಡೇಶಿವಾಲಯ ಶಾಖೆಯ ಮ್ಯಾನೇಜರ್ ಧನಂಜಯ್ ಹೆಚ್ ಮತ್ತು ಜೀವನ್ ಕೊಲ್ಯ ಭಾರತೀಯ ವಿಕಾಸ ಟ್ರಸ್ಟ್ ಕಾರ್ಯಕ್ರಮ ವ್ಯವಸ್ಥಾಪಕರು ತರಬೇತುದಾರದ ಬಬಿತಾ ಪತ್ತೊಡಂಗೆ ಉಪಸ್ಥಿತರಿದ್ದರು.
ರೋಟರಿ ಸಮುದಾಯ ದಳ ಕಡೇಶಿವಾಲಯದ ಚೇರ್ ಮ್ಯಾನ್ ಕೆ. ಕೆ. ಶೆಟ್ಟಿ ಕುರುಂಬ್ಲಾಜೆ ಸ್ವಾಗತಿಸಿ, ದಳದ ಕಾರ್ಯದರ್ಶಿ ಝಹೀರ್ ಪ್ರತಾಪನಗರ ವಂದಿಸಿದರು. ಪೂವಪ್ಪ ಮುಂಡಾಲ ಕಾರ್ಯಕ್ರಮ ನಿರೂಪಿಸಿದರು.