ಎಡತೊರೆ ಮಹೇಶ್
ಹೆಚ್.ಡಿ.ಕೋಟೆ : ತಾಲ್ಲೂಕಿನ ಆನಗಟ್ಟಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಅಂಬೇಡ್ಕರ್ ಸೇನೆ ಸಮಿತಿ ವತಿಯಿಂದ ಭೇಟಿ ನೀಡಿ ಮಕ್ಕಳಿಗೆ ಅಂಬೇಡ್ಕರ್ ಸೇನೆಯ ಅಧ್ಯಕ್ಷ ಮಹದೇವಸ್ವಾಮಿಕೋಟೆ ಮತ್ತು ಪದಾಧಿಕಾರಿಗಳು ಹಾಗೂ ಆನಗಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಸೋಮಣ್ಣ ಇವರ ಸಮ್ಮುಖದಲ್ಲಿ ಮಕ್ಕಳಿಗೆ 15ಛೇರು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆನಗಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಸೋಮಣ್ಣ ಮಾತನಾಡಿ, ಈ ದಿನ ಅಂಬೇಡ್ಕರ್ ಸೇನೆ ತಾಲ್ಲೂಕು ಸಮಿತಿಯಿಂದ ಅಂಗನವಾಡಿ ಮಕ್ಕಳಿಗೆ ಚೇರು ವಿತರಣೆ ಮಾಡುತ್ತಿರುವುದು ಖುಷಿಯ ವಿಚಾರವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ ಹೋರಾಟದ ಜೊತೆ ಜೊತೆಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಅಂಬೇಡ್ಕರ್ ಸೇನೆಯು ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಹೆಮ್ಮರವಾಗಿ ಬೆಳೆಯಲಿ ಎಂದು ಆಶಿಸಿದರು.
ಚೇರ್ ವಿತರಣೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸೋಮಣ್ಣ, ಗ್ರಾಮದ ಯಜಮಾನರಾದ ಜವರಾಜು, ಮುಖಂಡರಾದ ಗೋಪಾಲಯ್ಯ, ಅಂಬೇಡ್ಕರ್ ಸೇನೆ ಸಮಿತಿಯ ತಾಲ್ಲೂಕು ಅಧಕ್ಷ ಮಹದೇವಸ್ವಾಮಿಕೋಟೆ, ಪ್ರಧಾನ ಕಾರ್ಯದರ್ಶಿ ಗಣೇಶ್ ಆನಗಟ್ಟಿ ಖಜಾಂಚಿ ಹೆಗ್ಗಡಾಪುರ ವಿಶ್ವ(ಚಿಕ್ಕಣ್ಣ), ಸದಸ್ಯರಾ ಶಿವು ಶೀರನಹುಂಡಿ, ಯೋಗೀಶ್ ಜಕ್ಕಹಳ್ಳಿ, ರಂಗಸ್ವಾಮಿ ಕೂಲ್ಯ, ಮಾದೇಶ್ ಹುಲಿಕುರ, ಅಂಗನವಾಡಿ ಕಾರ್ಯಕರ್ತೆ ಯಶೋಧ ಹಾಗೂ ನಾಗಮ್ಮ ಇದ್ದರು.