ಮೈಸೂರು: ಕಳೆದ ಕೆಲ ದಿನಗಳ ಹಿಂದೆ ವಿದ್ಯುತ್ ಅಪಘಾತದಲ್ಲಿ ಸಿಲುಕಿ ಸಾವನ್ನಪ್ಪಿದ ಮೈಸೂರಿನ ಅಶೋಕಪುರಂ ನಿವಾಸಿಗಳಾದ ದಿ.ಕಿರಣ್ ಕುಮಾರ್ ಮತ್ತು ದಿ.ರವಿ ಕುಟುಂಬದವರಿಗೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್ ರವರು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪರವರ ಮೂಲಕ ತಲಾ 1.25 ಲಕ್ಷ ಪರಿಹಾರ ಮಂಜೂರು ಮಾಡಿಸಿ ಇಂದು ಚೆಕ್ ಗಳನ್ನು ಹಸ್ತಾಂತರ ಮಾಡಲಾಯಿತು.
ಈ ವೇಳೆ ಮುಖಂಡರಾದ ಅಶೋಕಪುರಂ ಮಂಜುನಾಥ್,ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ವಿನಯ್ ಕುಮಾರ್.ಜೆ, ಮುಖಂಡರಾದ ರಮೇಶ್ ರಾಮಪ್ಪ, ರವಿಶಂಕರ್,ವಿಜಯ್ ಕುಮಾರ್,ಯುವ ಕಾಂಗ್ರೆಸ್ ಮುಖಂಡರಾದ ರಾಕೇಶ್,ಅಬ್ರಾರ್ ಉಪಸ್ಥಿತರಿದ್ದರು.