ಶಿವಮೊಗ್ಗ: ದಿ: 11-05-2013 ರಂದು ವಾಹನ ಸಂಖ್ಯೆ ಕೆ.ಎ.17 ಎಫ್ 1284 ವಾಹನವು ಮಾರ್ಗ ಸಂಖ್ಯೆ 7/8 ರಲ್ಲಿ ಭದ್ರಾವತಿ-ಕೊಲ್ಲಾಪುರ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವಾಗ ಬಂಕಾಪುರ ಹತ್ತಿರ ಲಾರಿಗೆ ಕೆಎಸ್‍ಆರ್‍ಟಿಸಿ ಸಂಸ್ಥೆಯ ವಾಹನ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕ ಕೃಷ್ಣ ಕಬಾಳೆ, 47 ವರ್ಷ ಇವರ ವಾರಸುದಾರರಾದ ವಂದನಾ ಕೃಷ್ಣ ಕಬಾಳೆ, ಸಾ.ಮೊಳವಡೆ, ಶಾಹುವಾಡಿ ತಾಲ್ಲೂಕು, ಕೊಲ್ಲಾಪುರ ಜಿಲ್ಲೆ ಇವರಿಗೆ ಅಪಘಾತ ಪರಿಹಾರ ನಿಧಿಯಿಂದ ರೂ.2,50,000 ಚೆಕ್ಕನ್ನು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್.ಜಿ ರವರು ಹಸ್ತಾಂತರಿಸಿದರು.