ಮೈಸೂರು: ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಶ್ರೀರಾಮಮಂದಿರದ ಪವಿತ್ರ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ತಮ್ಮ 90 ವರ್ಷ ವಯಸ್ಸಿನಲ್ಲಿ ಈ ತಿಂಗಳು ಅಯೋಧ್ಯಾ, ಕಾಶಿ ಪ್ರವಾಸ ಮುಗಿಸಿ ಬಂದ ಶ್ರೀಮತಿ ಶಾರದಮ್ಮ ವೆಂಕಟಕೃಷ್ಣಪ್ಪ ರವರನ್ನು ಹಾಗೂ ತಮ್ಮ ಜೀವನ ಪೂರ್ತಿ ಪ್ರತಿ ಶನಿವಾರ ಶ್ರೀ ರಾಮ ಕಥಾ ಪಠಣ ಮಾಡಿದ ಶ್ರೀಮತಿ ಇಂದಿರಮ್ಮ ಗುಂಡಪ್ಪ ರವರವನ್ನು ವಿಶ್ವ ಹಿಂದೂ ಪರಿಷತ್ ನ ಕೆ. ನರಸಿಂಹ ಮೂರ್ತಿ ಭಟ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣೇಶ್ ಜಿ. ಎಸ್ ರಾಮ ಮಂದಿರದ ಪವಿತ್ರ ಮಂತ್ರಾಕ್ಷತೆ ನೀಡಿ ಗೌರವಿಸಿದರು.

ಪ್ರತಿ ಮನೆಗಳಿಗೂ ಭೇಟಿ ನೀಡಿ ಪವಿತ್ರ ಮಂತ್ರಾಕ್ಷತೆ, ರಾಮಮಂದಿರ ಪರಿಚಯದ ಕರ ಪತ್ರ ಮತ್ತು ಅಯೋಧ್ಯಾ ರಾಮಮಂದಿರದ ಭಾವಚಿತ್ರ ನೀಡಲಾಯಿತು. ಶ್ರೀರಾಮ ದೇವರಿಗೆ ಪಂಚೋಪಚಾರ ಪೂಜೆ, ಭಜನೆ, ರಾಮ ತಾರಕ ಮಂತ್ರ ಹಾಗೂ ರಾಮ ರಕ್ಷಾ ಸ್ತೋತ್ರ ಪಠಣ ಮಾಡಿ ಪ್ರಸಾದ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ದಕ್ಷಿಣ ಭಾರತದ ಪ್ರಮುಖರಾದ ಕೆ.ಎನ್. ಭಟ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣೇಶ್ ಜಿ ಎಸ್, ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿ ಅಧ್ಯಕ್ಷರಾದ ಕೆ.ಆರ್. ಗಣೇಶ್, ರಾಮಕೃಷ್ಣ ಹಾಗೂ ಪದಾಧಿಕಾರಿಗಳು,
ವಿಶ್ವ ಹಿಂದೂ ಪರಿಷತ್ ಶ್ರೀರಾಂಪುರ ವಿಭಾಗದ ಪ್ರಮುಖರಾದ ರಮೇಶ್, ಜ್ಯೋತಿ, ಪರಸಯ್ಯನಹುಂಡಿ ಹಾಗೂ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳು ಹಾಜರಿದ್ದರು.