ಮೈಸೂರು: ಮೈಸೂರಿನ ಜೆಪಿ ನಗರದ ರಾಮಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ಷಷ್ಠಿ ಪೂರ್ತಿ ಕಾರ್ಯಕ್ರಮದ ಅಂಗವಾಗಿ ಅಯೋಧ್ಯ ರಾಮಮಂದಿರದ ಪ್ರಸಾದ ಹಾಗೂ ಸಪ್ತ ನದಿಗಳ ತೀರ್ಥವನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಯುತ ಡಿಟಿ ಪ್ರಕಾಶ್ ರವರು ಭಾರತೀಯ ಹಿಂದೂಗಳಿಗೆ ಹಿಂದೂ ರಾಷ್ಟ್ರ ಅಂತ ಇರುವುದು ಭಾರತ ಮಾತ್ರ ನಾವೆಲ್ಲರೂ ಒಗ್ಗಟ್ಟಾಗಿ ಈ ದಿನ ಒದಗುತ್ತಿರುವ ಸಂಕಷ್ಟಗಳನ್ನು ಎದುರಿಸಿ ಹಿಂದೂ ಧರ್ಮವನ್ನು ಮತ್ತಷ್ಟು ಬಲಿಷ್ಠವಾಗಿ ಮಾಡಬೇಕು ಇಲ್ಲದಿದ್ದರೆ ನಮ್ಮ ಸುತ್ತಲಿನ ರಾಷ್ಟ್ರಗಳಲ್ಲಿ ಆಗುತ್ತಿರುವ ರಾಷ್ಟ್ರೀಯ ಅನಾಗರಿಕ ಅಜಾಗರೂಕ ಬಿಕ್ಕಟ್ಟು ಮುಂದೆ ನಮಗೂ ಒದಗಿ ಬರಬಹುದು.
ಭಾರತೀಯರೆಲ್ಲರೂ ಭವಿಷ್ಯದ ಭಾರತದ ದೃಷ್ಟಿಯಿಂದ ಒಂದಾಗಬೇಕು ಒಂದಾದರೆ ಮಾತ್ರ ಸನಾತನ ಹಿಂದೂ ಧರ್ಮವೂ ಮುಂದಿನ ತಲೆಮಾರಿಗೆ ಸುಭದ್ರವಾಗಿ ಮತ್ತಷ್ಟು ಬಲಿಷ್ಠವಾಗಿ ಉಳಿದುಕೊಳ್ಳುತ್ತದೆ ಇಲ್ಲದಿದ್ದರೆ ಮುಂದಿನ ತಲೆಮಾರು ನಮ್ಮ ಅಜಾಗರಕತೆಯಿಂದ ಸಂಕಷ್ಟಕ್ಕೆ ಗುರಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಮೇಲುಕೋಟೆಯ ಇಲೈ ಆಳ್ವಾರ್ ಸ್ವಾಮೀಜಿಯವರು ಮಾತನಾಡಿ ಈ ದಿನ ಸಂಘಟನೆಗಳು ಬಹಳ ದುರ್ಬಲವಾಗುತ್ತಿವೆ ಸಂಘಟನೆಗಳಿಗೆ ಕಾರ್ಯಕರ್ತರ ಸಂಖ್ಯೆ ಕ್ಷೀಣಿಸುತ್ತಿವೆ. ಸರ್ಕಾರಗಳು ಸಮುದಾಯಗಳು ಹಲವಾರು ವಿಧವಾದ ನಿರ್ಬಂಧಗಳನ್ನು ಹಿಂದೂ ಸಮಾಜದ ಮೇಲೆ ಹೇರುತ್ತಿವೆ . ನಮ್ಮ ಧಾರ್ಮಿಕ ಆಚರಣೆಗಳನ್ನು ಆಚರಿಸಲು ಅನುಸರಿಸಲು ಮುಂದಿನ ದಿನಗಳಲ್ಲಿ ನಾವು ಸರತಿ ಸಾಲಿನಲ್ಲಿ ನಿಂತು ಹಲವು ಸಂಸ್ಥೆಗಳಲ್ಲಿ ಅನುಮತಿಯನ್ನು ಪಡೆದು ಮಾಡುವ ಪರಿಸ್ಥಿತಿ ಬರಬಹುದು.
ಹಿಂದೆ ಹಲವಾರು ಜನರು ಸಂಘ-ಸಂಸ್ಥೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನದಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಹಲವಾರು ಹೋರಾಟಗಳನ್ನು ಮಾಡಿ ನಮ್ಮ ಸಾರ್ವಜನಿಕ ಆಚರಣೆಗಳನ್ನು ಉಳಿಸಿಕೊಂಡಿದ್ದೇವೆ ಆದರೆ ಈಗ ಸಂಘಟನೆಗಳಿಗೆ ಜನರು ಬರದೆ ಇರುವುದು ಸಂಘಟನೆಗಳ ಶಕ್ತಿ ಕುಂದುತ್ತಿದೆ ನಮ್ಮ ಧಾರ್ಮಿಕ ಶ್ರದ್ಧಾಕೇಂದ್ರಗಳು ಇಂದು ಅನ್ಯರ ಆಡಳಿತ ಆಚರಣೆ ದಬ್ಬಾಳಿಕೆಗಳಿಗೆ ಕೇಂದ್ರ ಸ್ಥಾನವಾಗಿ ಬದಲಾಗುತ್ತಿದೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ನಮಗೆ ನಮ್ಮ ಶ್ರದ್ಧಾ ಕೇಂದ್ರಗಳೇ ಇಲ್ಲದ ಹಾಗೆ ಆಗಬಹುದು ಭಾರತೀಯ ಹಿಂದೂಗಳೆಲ್ಲರೂ ಒಂದಾಗಿ ಸನಾತನ ಧರ್ಮದ ಉಳಿವು ಬೆಳವಣಿಗೆ ಆಚರಣೆಗಳಿಗೆ ಸದಾ ಸನ್ನದ್ಧರಾಗಿ ಸಿದ್ದರಾಗಿರಬೇಕು ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಸಹಕಾರ್ಯದರ್ಶಿ ಪುನೀತ್ ಜಿ ಮಾತನಾಡಿ 60 ವರ್ಷಗಳ ಹಿಂದೆ ಕೃಷ್ಣ ಜನ್ಮಾಷ್ಟಮಿಯ ದಿನ ಶ್ರೀಕೃಷ್ಣ ಪರಮಾತ್ಮ ತನ್ನ ಅಧ್ಯಯನಗಳನ್ನು ಮಾಡಿದ ಮುಂಬೈನ ಸಂದೀಪೀನಿ ಆಶ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೀ ಗುರೂಜಿರವರ ಮಾರ್ಗದರ್ಶನದಂತೆ ಸ್ಥಾಪನೆಗೊಂಡಿತು. 60 ವರ್ಷಗಳಿಂದ ಭಾರತ ಮತ್ತು ವಿದೇಶಗಳಲ್ಲಿ ಸನಾತನ ಹಿಂದೂ ಧರ್ಮದ ಧಾರ್ಮಿಕ ಆಚರಣೆಗಳಿಗೆ ಪೂರಕವಾಗಿ ವಿಶ್ವ ಹಿಂದೂ ಪರಿಷತ್ ತನ್ನ ಕೆಲಸವನ್ನು ಮಾಡುತ್ತಿದೆ.
ವಿಶ್ವ ಹಿಂದೂ ಪರಿಷತ್ ನಾಗರಿಕರಲ್ಲಿ ಧರ್ಮ ಜಾಗೃತಿ ಮೂಡಿಸಲು ಸತ್ಸಂಗ, ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸಲು ಬಾಲ ಸಂಸ್ಕಾರ ಕೇಂದ್ರಗಳನ್ನು, ಮಠ ಮಂದಿರ ಅರ್ಚಕ ವಿಭಾಗಗಳಲ್ಲಿ ಧಾರ್ಮಿಕ ಆಚರಣೆ ಮಾಡುವ ಪುರೋಹಿತರು ಸ್ವಾಮೀಜಿಗಳು ಧರ್ಮದರ್ಶಿಗಳು ಈ ರೀತಿ ಧಾರ್ಮಿಕ ಕೆಲಸಗಳನ್ನು ಮಾಡುವ ಪ್ರಮುಖರನ್ನು ಸೇರಿಸಿ ಸಾರ್ವಜನಿಕರಲ್ಲಿ ಧರ್ಮ ಜಾಗೃತಿಯನ್ನು ಮೂಡಿಸುತ್ತಿದೆ.
ಭಾರತವು ಅಸ್ಪೃಶ್ಯತೆ ಎಂಬ ಕಾಯಿಲೆಗೆ ಸಿಲುಕಿ ಶತಮಾನಗಳಿಂದ ನರಳುತ್ತಿದೆ ಈ ಅಸ್ಪೃಶ್ಯತೆಯಿಂದ ಸಮಾಜವನ್ನು ಮುಕ್ತಿಗೊಳಿಸಲು ಸಾಮರಸ್ಯ ವೇದಿಕೆ ಭಾರತದ್ಯಂತ ಹಲವಾರು ಕೆಲಸಗಳನ್ನು ಮಾಡುತ್ತಿದೆ. ಮಹಿಳೆಯರಲ್ಲಿ ಹಾಗೂ ಯುವತಿಯರಲ್ಲಿ ಧೈರ್ಯ ಸ್ಥೈರ್ಯ ವೀರತನವನ್ನು ಬೆಳೆಸಲು ಮಾತೃಶಕ್ತಿ ಹಾಗೂ ದುರ್ಗವಾಹಿನಿ ಎಂಬ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಷ್ಟೇ ಅಲ್ಲದೆ ಧರ್ಮಪ್ರಸಾರ ಧರ್ಮಪ್ರಚಾರ ಎಂಬ ಎರಡು ವಿಭಾಗದಲ್ಲಿ ಆಮೀಷಗಳಿಗೆ ಒಳಗಾಗಿ ಮತಾಂತರಗೊಳ್ಳುವ ಹಿಂದುಗಳನ್ನು ಸನಾತನ ಹಿಂದೂ ಧರ್ಮದಲ್ಲೇ ಉಳಿಸುವ ಕಾರ್ಯವನ್ನು ಮಾಡುತ್ತಿದೆ.
ಅಯೋಧ್ಯೆ ಮಥುರ ಕಾಶಿ ಕಾಂಚಿ ಅವಂತಿಕ ಪುರಿ ದ್ವಾರಕಾ ಹಿಂದುಗಳ ಧಾರ್ಮಿಕ ಮೋಕ್ಷ ಕ್ಷೇತ್ರಗಳು ಇದರಲ್ಲಿ ಹಲವು ಕ್ಷೇತ್ರಗಳು ಈಗಲೂ ಸಹ ಬಂಧನದಿಂದ ಕೂಡಿದೆ ವಿಶ್ವ ಹಿಂದೂ ಪರಿಷತ್ ನ ನಾಯಕತ್ವದಲ್ಲಿ ನಡೆದ ಅಯೋಧ್ಯ ಹೋರಾಟ ಫಲಗೊಂಡಿದ್ದು ಅಯೋಧ್ಯೆಯಲ್ಲಿ ರಾಷ್ಟ್ರ ಮಂದಿರವಾದ ರಾಮಮಂದಿರ ಲೋಕಾರ್ಪಣೆಯಾಗಿದೆ. ಸಾರ್ವಜನಿಕರು ಧರ್ಮಾಸಕ್ತರು ವಿಶ್ವ ಹಿಂದೂ ಪರಿಷತ್ ಜೊತೆಗೆ ಕೈಜೋಡಿಸಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠವಾಗಿ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮಾರ್ಗದರ್ಶಿಗಳಾದ ಸುಬ್ರಹ್ಮಣ್ಯ ಜಟ್ಟಪ್ಪ, ಕಾರ್ಯದರ್ಶಿ ಮಧುಶಂಕರ್, ನರಸಿಂಹಮೂರ್ತಿ, ಉಪಾಧ್ಯಕ್ಷರಾದ ಶ್ರೀಮತಿ ಅಂಬಿಕಾ, ಜನಾರ್ಧನ್ ರವರು, ಶಿವು, ಸಹಕಾರ್ಯದರ್ಶಿ ಶ್ರೀಮತಿ ಜಯಶ್ರೀ ಶಿವರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.