ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತ್ರೀವಿಧ ದಾಸೋಹಿ ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ ಪರಮಪೂಜ್ಯ ಡಾ. ಶ್ರೀ.ಶ್ರೀ.ಶ್ರೀ.ಶಿವಕುಮಾರ ಸ್ವಾಮಿಗಳವರ ೧೧೭ನೇ ಜನ್ಮದಿನೋತ್ಸವ ಹಾಗೂ ಅವರ ಆದರ್ಶ ತತ್ವಗಳನ್ನು ನಾವೇಲ್ಲರೂ ಅಳವಡಿಸಿಕೊಳ್ಳಿ ಎಂದು ತಾ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮತ್ತು ನೌಕರರ ಸಂಘದ ಅಧ್ಯಕ್ಷ ರಾಜಶೇಖರ್ ಹೇಳೀದರು.
ಕೆ.ಆರ್.ನಗರ ಪಟ್ಟಣದ ಗರುಡಗಂಭ ವೃತ್ತ ಬಳಿ ಪರಮಪೂಜ್ಯ ಡಾ. ಶ್ರೀ.ಶ್ರೀ.ಶ್ರೀ.ಶಿವಕುಮಾರ ಸ್ವಾಮಿಗಳವರ ೧೧೭ನೇ ಜನ್ಮದಿನೋತ್ಸವ ಹಾಗೂ ಪೂಜ್ಯರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಶಿಕ್ಷಣಾ ಕ್ಷೇತ್ರದಲ್ಲಿ ಬಡ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ರಾಜ್ಯದಲ್ಲಿ ಉನ್ನತ ಆಧಿಕಾರಿಗಳನ್ನಾಗಿ ಈ ಸಮಾಜಕ್ಕೆಕೊಟ್ಟಂತ ಕೊಡಿಗೆ ಡಾ.ಶ್ರೀ.ಶ್ರೀ.ಶಿವಕುಮಾರ ಸ್ವಾಮಿಗಳಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.
ಯಾವುದೇ ಒಬ್ಬ ವ್ಯಕ್ತಿ ಸ್ವಾಭಿಮಾನದಿಂದ ತಮ್ಮ ಬದುಕು ಕಟ್ಟಿಕೊಳ್ಳಬೇಕೆಂದರೆ ಶ್ರೀ.ಶ್ರೀ.ಶ್ರೀ.ಶಿವಕುಮಾರ ಸ್ವಾಮಿಯವರು ನಡೆದು ಬಂದ ಹಾದಿಯ ಇತಿಹಾಸ ತಿಳಿದರೆ ಸಾಕು ತಮ್ಮ ಜೀವನದಲ್ಲಿ ಸಾಧನೆ ಮಾಡಬಹುದು ಮನುಷ್ಯನ ಜೀವನದಲ್ಲಿ ಮುಖ್ಯವಾಗಿ ಬೇಕಾಗಿರುವುದು ಶಿಕ್ಷಣದಾನ, ಅನ್ನಾದಾಸೋಹ ನೀಡುವ ಮೂಲಕ ಲಕ್ಷಂತಾರ ಬಡ ವಿಧ್ಯಾರ್ಥಿಗಳ ದಾರಿದೀಪಾವಾಗಿದ್ದರೆ ಹಾಗಾಗಿ ರಾಜ್ಯ, ಹೊರರಾಜ್ಯ ಮತ್ತು ದೇಶದಲ್ಲಿ ಅವರ ಭಾವ ಚಿತ್ರ ನೋಡಿದರೆ ಸಾಕು ಕೈ ಮುಗಿಯುತ್ತಾರೆ ಅಂತಹ ವ್ಯಕ್ತಿತ್ವವುಳ್ಳ ಪೂಜ್ಯರು ಮತ್ತೋಮ್ಮೆ ಹುಟ್ಟಿ ಬರಲೇಂದು ಈ ಮೂಲಕ ಪ್ರಾರ್ಥನೆ ಮಾಡಿ ೧೧೭ನೇ ಜಯಂತೋತ್ಸಾವನ್ನು ಮಜ್ಜಿಗೆ ಮತ್ತು ಪ್ರಸಾದ ವಿತರಿಸುವ ಮೂಲಕ ಆಚರಿಸಲಾತು.
ಈ ಕಾರ್ಯಕ್ರಮದಲ್ಲಿ ವೀರಶೈವ ಸಮುದಾಯದ ಉಪಾಧ್ಯಕ್ಷ ಪ್ರಕಾಶ್, ಮುಖಂಡರಾದ ಕಲ್ಯಾಣಪುರ ಚಂದ್ರಶೇಖರ್, ಕೆಂಪರಾಜು, ಮಹೇಶ್, ಲಿಂಗಪ್ಪ, ಸುಮ, ದ್ರಾಕ್ಷಯಿಣಿ, ಸರ್ವಜ್ಞ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್,ಲಾಲನಹಳ್ಳಿ ಮಹೇಶ್, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.