ಗುಂಡ್ಲುಪೇಟೆ: ತಾಲೂಕಿನ ಪರಿಸರ ಮಿತ್ರ ಹೊಂಗಹಳ್ಳಿ ಶಾಲಾ ಮಕ್ಕಳಿಗೆ ಬೆಂಗಳೂರಿನ ಸಮತ್ವ ಸ್ವಯಂ ಸೇವಾ ಸಂಸ್ಥೆಯ ಸಂಜಯ್ ತಂಡದವರು ಶಾಲಾ ಬ್ಯಾಗ್ ಹಾಗೂ ಲೇಖನಿ ಸಾಮಾಗ್ರಿಗಳನ್ನು ವಿತರಣೆ ಮಾಡಿದರು.
ಹೊಂಗಹಳ್ಳಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 75 ಸಾವಿರ ರೂ. ಮೌಲ್ಯದ ಶಾಲಾ ಬ್ಯಾಗ್, ನೋಟ್ ಬುಕ್, ಲೇಖನಿ ಸಾಮಾಗ್ರಿ, ಟಿ ಶರ್ಟ್, ಸಾಕ್ಸ್, ಟೈ ಬೆಲ್ಟ್ ಗಳನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಸಮತ್ವ ಸ್ವಯಂ ಸೇವಾ ಸಂಸ್ಥೆಯ ಸಂಜಯ್, ಶಾಲೆಯ ಶೈಕ್ಷಣಿಕ ಚಟುವಟಿಕೆಗಳನ್ನು ವೀಕ್ಷಿಸಿ ಸ್ಫೂರ್ತಿಗೊಂಡು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಕಲ ರೀತಿಯಲ್ಲೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಹೊಂಗಹಳ್ಳಿ ಶಾಲೆ ರಾಜ್ಯಕ್ಕೆ ಮಾದರಿಯಾಗಿದ್ದು, ಇಲ್ಲಿನ ಮಕ್ಕಳು ವಿದ್ಯಾ, ಬುದ್ಧಿ, ಹೃದಯವಂತರನ್ನಾಗಿ ಶಾಲೆಯು ಶಿಕ್ಷಕ ವೃಂದ ಮಾಡುತ್ತಿದೆ. ಆದ್ದರಿಮದ ಇಲ್ಲಿನ ಮಕ್ಕಳು ಮುಂದೆ ಸಮಾಜಕ್ಕೆ ದೊಡ್ಡ ಆಸ್ತಿ ಆಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಇಂತಹ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಮಹದೇಶ್ವರಸ್ವಾಮಿ, ಶಿಕ್ಷಕರಾದ ಪ್ರಭಾಕರ, ವಿನೋದ, ಅತಿಥಿ ಶಿಕ್ಷಕಿ ಕವಿತ, ಜಯಶೀಲ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು.