ಗುಂಡ್ಲುಪೇಟೆ: ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ಶಾಲಾ ಮಕ್ಕಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನೀಡಿದ
ಶೂ ಮತ್ತು ಸಾಕ್ಸ್ ಅನ್ನು ಪುರಸಭಾ ಸದಸ್ಯ ಎಚ್.ಆರ್. ರಾಜಗೋಪಾಲ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಸದಸ್ಯ ಎಚ್.ಆರ್. ರಾಜಗೋಪಾಲ್, ಪ್ರತಿ ವರ್ಷದಂತೆ ಈ ಬಾರಿಯೂ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲಾ ಮಕ್ಕಳಿಗೆ ದಾಖಲಾತಿ ಆಂದೋಲನದ ಮೂಲಕ ಪ್ರವೇಶಾತಿ ನೀಡಿ ನಂತರ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಬಿಸಿಯೂಟ ಇತರೇ ಸರ್ಕಾರಿ ಸೌಲಭ್ಯ ನೀಡುತ್ತಿದೆ.ಅದೇ ರೀತಿ ಶೂ ಸಾಕ್ಸ್ ಅನ್ನು ಸಹ ನೀಡಲಾಗಿದೆ. ಇದನ್ನು ಪ್ರತಿಯೊಬ್ಬ ಪೋಷಕರು ಬಳಸಿಕೊಂಡು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಮುಖ್ಯ ಶಿಕ್ಷಕ ಮೋಹನ್ ಕುಮಾರ್, ಶಿಕ್ಷಕಿ ಶರ್ಮಿಳಾ, ಸಿಬ್ಬಂದಿ ರೇಣುಕಾ ಇತರರು ಇದ್ದರು.