ಬಳ್ಳಾರಿ: ರಾಜ್ಯದಲ್ಲಿ ಮಳೆ ಬೀಳದೆ ಅನ್ನದಾತ ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು, ರಾಜ್ಯ ಸರ್ಕಾರ ಬರಗಾಲ ಪೀಡತ ಎಂದು ಘೋಷಿಸಿ ರೈತರಿಗೆ ನೆರವಾಗುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಬಳ್ಳಾರಿ ಜಿಲ್ಲಾ ಬಿಜೆಪಿ ಘಟಕ ನಗರದ ಮಿನಿ ವಿಧಾನಸೌದದ ಬಳಿ ಪ್ರತಿಭಟನೆ ನಡೆಸಿತು.
ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ನೇತೃತ್ವದಲ್ಲಿ, ಬಿಜೆಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷ್ಯ ಗುರುಲಿಂಗನ ಗೌಡ ಮತ್ತು ನೂರಾರು ರೈತರು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ನಮ್ಮ ಸರ್ಕಾರ ರೈತ ಪರ ಘೋಷಿಸಿದ ಹತ್ತ ಹಲವು ಯೋಜನೆಗಳನ್ನ ಕೈಬಿಟ್ಟಿದ್ದು, ಬರಗಾಲಕ್ಕೆ ತುತ್ತಾಗಿರುವ ಅನ್ನದಾತನಿಗೆ ಪರಿಹಾರದ ಬಗ್ಗೆ ಯೋಚಿಸದೆ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ರೈತ ದೇಶದ ಬೆನ್ನೆಲುಬು ರೈತನಿಗೆ ಬಿಜೆಪಿ ಬೆನ್ನೆಲುಬಾಗದಿದ್ದರೆ ನಮ್ಮ ಪಕ್ಷವು ವ್ಯೆರ್ಥ ಹೀಗಾಗಿ ಹೋರಾಟ ಹಮ್ಮಿಕೊಂಡುದ್ದು ಸರ್ಕಾರ ಹೆಚ್ಚೊತ್ತುಕೊಂಡು ಬರಗಾಲ ಎಂದು ಘೋಷಿಸಿ ಅನ್ನದಾತನಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ.
ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರಸಲ್ಲಿಸಿದರು.
ಈ ಸಂದರ್ಭದಲ್ಲಿ, ಎಂ ಎಲ್ ಸಿ ಸತೀಶ್, ರೈತ ಮೊರ್ಚಾ ಜಿಲ್ಲಾಧ್ಯಕ್ಷ್ಯ ಗುರುಲಿಂಗನಗೌಡ ಸೇರಿದಂತೆ ವಿವಿಧ ವಿಭಾಗದ ಮುಖಂಡರು ನೂರಾರು ರೈತರು ಬಾಗಿಯಾಗಿದ್ದರು.