ಚಾಮರಾಜನಗರ : ಚಾಮರಾಜನಗರ ತಾಲೂಕು ಬಿಸಲವಾಡಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಜಿಲ್ಲಾಧಿಕಾರಿಯವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ವಿದ್ಯಾರ್ಥಿನಿಲಯದಲ್ಲಿ ದಾಸ್ತಾನು ಮಾಡಲಾಗಿದ್ದ ದಿನಸಿ ಸಾಮಾಗ್ರಿಗಳು ಹಾಗೂ ಅದರ ಗುಣಮಟ್ಟವನ್ನು ಪರಿಶೀಲಿಸಿ ಊಟದ ಹಾಲ್‌ಗೆ ತೆರಳಿ ವಿದ್ಯಾರ್ಥಿಗಳಿಗೆ ತಯಾರಿಸಲಾಗಿದ್ದ ಬೆಳಗಿನ ಉಪಹಾರದ ಗುಣಮಟ್ಟ ವೀಕ್ಷಿಸಿದರು. ಹಾಸ್ಟೆಲ್‌ನ ಇನ್ನಿತರ ಕೊಠಡಿಗಳಿಗೂ ಭೇಟಿ ನೀಡಿದರಲ್ಲದೇ ಕಲ್ಪಿಸಲಾಗಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಬಗ್ಗೆ ಮಾಹಿತಿ ಪಡೆದರು. ವಿದ್ಯಾರ್ಥಿನಿಲಯದಲ್ಲಿ ಒದಗಿಸಲಾಗಿರುವ ಸೌಕರ್ಯ, ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿದರು.