ಬಾಗಲಕೋಟ:-ಮುಧೋಳ ತಾಲೂಕಿನ ಲೋಕಾಪುರ ಪಟ್ಟಣದ ವೆಂಕಟಾಪೂರ ಹಿರಿಯ ಪ್ರಾಥಮಿಕ ಶಾಲೆಗೆ ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಆಕಸ್ಮಿಕ ಭೇಟಿ ಮಾಡಿದರು. ಶಾಲೆ ಶಿಕ್ಷಣ ಗುಣಮಟ್ಟದ ಮತ್ತು ಮಕ್ಕಳ ಕಲಿಕೆ ,ಬಿಸಿಊಟ ವ್ಯವಸ್ಥೆ ಪರಿಶೀಲಿಸಿದರು. ಸರಕಾರಿ ಶಾಲಾ ಸುಂದರ ಪರಿಸರ ನೋಡಿ ಸಂತಸಪಟ್ಟರು. ಈ ಸಂದರ್ಭದಲ್ಲಿ ತಹಸೀಲ್ದಾರ ವಿನೋದ ಹತ್ತಳ್ಳಿ,ಶಾಲೆಯ ಮುಖ್ಯೋಪಾಧ್ಯಾಯ ರಾಜಶೇಖರ ಮುತ್ತಿನಮಠ, ಶಾಲಾ ಶಿಕ್ಷಕ ವೃಂದದವರು ಇದ್ದರು.
