ಬೆಂಗಳೂರು: ಇಂದು ಅಥವಾ ನಾಳೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವ ಚಲುವರಾಯಸ್ವಾಮಿ, ಕೆಲ ಜಿಲ್ಲೆಗಳಿಗೆ ಸಚಿವರು ಇಲ್ಲ, ಇದೆಲ್ಲವನ್ನೂ ಪರಿಶೀಲಿಸಬೇಕಾಗುತ್ತೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಲ್ಲಿ ಯಾವುದೇ ಸಮಸ್ಯೆ ಆಗಲ್ಲ. 34 ಮಂದಿ ಸಚಿವರನ್ನ ಒಂದೇ ಬಾರಿಗೆ ನೇಮಕ ಮಾಡುತ್ತೇವೆ. ನಮ್ಮ ಪಕ್ಷದ ಎಷ್ಟು ಸಧೃಡವಾಗಿದೆ ಎಂದರು.
ಸರ್ಕಾರ ರಚನೆ ಆದ ಮೇಲೆ ಅಧಿಕೃತ ಕಚೇರಿ ಆರಂಭ ಮಾಡಿದ್ದೀನಿ. ಈಗಾಗಲೇ ಸಭೆ ಮಾಡಿ ಮುಂಗಾರಿಗೆ ತಯಾರಾಗಬೇಕಿದೆ. ಎಲ್ಲ 31 ಜಿಲ್ಲೆಗಳಲ್ಲಿ ತಯಾರಿ ಆಗಿದೆ. ನಿರಂತರವಾಗಿ ಚರ್ಚೆ ನಡೆಯುತ್ತಿದೆ. ಹೊಸ ಕಾರ್ಯದರ್ಶಿ ಗಮನ ಹರಿಸುತ್ತಿದ್ದಾರೆ. ಬೆಳಗಾವಿ ವಿಭಾಗದಲ್ಲಿ ಅಧಿಕಾರಿಗಳ ಸಭೆ ಇದೆ. ಪ್ರಮುಖವಾಗಿ ರೈತರ ಸಮಸ್ಯೆಗಳ ಬಗ್ಗೆ ಜೆಡಿಗಳ ಜೊತೆ, ಇಲಾಖೆ ಕಾರ್ಯದರ್ಶಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡಿದ್ದಾರೆ. ಏನೆಲ್ಲ ಸಿದ್ದತೆ ಆಗಿದೆ ಎಂದು ಮಾಹಿತಿ ನೀಡಿದರು.
5 ಗ್ಯಾರಂಟಿ ಚುನಾವಣಾ ಗಿಮಿಕ್ ವಿಡಿಯೋ ವೈರಲ್ ವಿಚಾರವಾಗಿ ಮಾತನಾಡಿದ ಅವರು ಏನು ಇಲ್ಲವಲ್ಲ, ಗ್ಯಾರಂಟಿ ಆರಂಭ ಆಗಿದೆ ಅಲ್ವ. ಅದು ಬಿಡಪ್ಪ ಅದು, ಅದು ಹೇಳಿಕೆ ಅಲ್ಲ. ಅದು ಜನರಲ್ ಆಗಿ ಚರ್ಚೆ ಮಾಡುವ ವೇಳೆ ಹೇಳಿರುವ ಹೇಳಿಕೆ ಅದು. ಅದು ಬಿಟ್ಟು ಬಿಡಿ. 11ಕ್ಕೆ ಗ್ಯಾರಂಟಿ ಚಾಲನೆ ನೀಡುತ್ತೇವೆ ಎಂದು ಹೇಳಿದರು.