Saturday, April 19, 2025
Google search engine

Homeರಾಜ್ಯದೀಪಾವಳಿ ಹಬ್ಬ: ಪಟಾಕಿ ಸಿಡಿತದಿಂದ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಏರಿಕೆ

ದೀಪಾವಳಿ ಹಬ್ಬ: ಪಟಾಕಿ ಸಿಡಿತದಿಂದ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಏರಿಕೆ

ಬೆಂಗಳೂರು : ರಾಜ್ಯಾದ್ಯಂತ ಸಂಭ್ರಮ ಸಡಗರದಿಂದ ದೀಪಾವಳಿ ಹಬ್ಬ ಆಚರಣೆಯಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ನಗರ ಪೊಲೀಸ್ ಪಟಾಕಿ ಸಿಡಿಸುವ ಮುಂಚೆ ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳಿ ಎಂದು ಹೇಳಿತ್ತು. ಜತೆಗೆ, ಹಸಿರು ಪಟಾಕಿ ಮಾತ್ರ ಬಳಕೆ ಮಾಡಲು ಸೂಚಿಸಿತ್ತು. ತಪ್ಪಿದಲ್ಲಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಸಹ ನೀಡಿತ್ತು. ಹಬ್ಬದ ಆರಂಭದಿಂದ ನಗರದ ಹಲವೆಡೆ ಜನರು ಪಟಾಕಿ ಹಚ್ಚಾಗಿದ್ದು ಪಟಾಕಿ ಸಿಡಿಸಿದಕ್ಕೆ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದೆ.

ಎರಡೇ ದಿನಕ್ಕೆ ನಿತ್ಯ ಬೆಂಗಳೂರಿನಲ್ಲಿ ವಾಹನಗಳ ಹೊಗೆ, ಧೂಳಿನಿಂದ ವಾಯು ಮಾಲಿನ್ಯ ಉಂಟಾಗುತ್ತಿತ್ತು. ಇದೀಗ ಪಟಾಕಿ ಮಾಲಿನ್ಯದಿಂದ ನಗರದ ವಾಯುಮಾಲಿನ್ಯ ಡಬಲ್ ಆಗಿದೆ. ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಬೆಂಗಳೂರಿನ ವಾಯು ಗುಣಮಟ್ಟ (ಎಕ್ಯೂಐ) ೧೦೦ರ ಗಡಿ ದಾಟಿದೆ.

ಬೆಂಗಳೂರಿನಲ್ಲಿ ವಾಯುಗುಣಮಟ್ಟ ಸೂಚ್ಯಂಕ ಗಂಭೀರ ಸ್ಥಿತಿಗೆ ಹೋಗಿದೆ. ಇದು ಹಲವು ಆತಂಕಕ್ಕೆ ಕಾರಣವಾಗಿದೆ. ಈ ವಾಯು ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀಳಲಿದೆ. ಹೆಚ್ಚಾಗಿ ಮಕ್ಕಳ ಮತ್ತು ವಯಸ್ಕರು ಎಚ್ಚರಿಕೆಯಿಂದ ಇರಬೇಕು. ಉಸಿರಾಟದ ಸಮಸ್ಯೆ, ಅಸ್ತಮ, ಕೆಮ್ಮು ರೋಗಗಳಿಂದ ಬಳಲುತ್ತಿರುವವರಿಗೆ ಮಾಲಿನ್ಯ ವಿಷವಾಗಬಹುದು ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ.

ಜಯನಗರ ಜಯನಗರದಲ್ಲಿ ಸಾಮಾನ್ಯ ದಿನಗಳಲ್ಲಿ ೧೦೫ ಇದ್ದ ಮಾಲಿನ್ಯಕಾರಕಗಳ ಪ್ರಮಾಣ ೨೮೨ಕ್ಕೆ ಏರಿಕೆಯಾಗಿದೆ. ಪಿಎಮ್ ೨.೫ ಮಾಲಿನ್ಯಕಾರಕಗಳು ಹೆಚ್ಚು ಇದ್ದು ಗುಣಮಟ್ಟ ಕಳಪೆಯಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಮೆಜೆಸ್ಟಿಕ್‌ನಲ್ಲಿ ೬೭ ರಿಂದ ೧೦೧ಕ್ಕೆ ಏರಿಕೆಯಾಗಿದೆ. ಜಿಗಣಿಯಲ್ಲಿ ೮೦ ರಿಂದ ೧೨೮ಕ್ಕೆ ಏರಿಕೆಯಾಗಿದೆ. ಪೀಣ್ಯದಲ್ಲಿ ೮೦ ರಿಂದ ೧೦೮ಕ್ಕೆ ತಲುಪಿದೆ. ಮೈಲಸಂದ್ರದಲ್ಲಿ ೭೮ ರಿಂದ ೧೮೭ ಕ್ಕೆ ಏರಿಕೆಯಾಗಿದೆ. ಕೆಆರ್‌ಪುರಂನಲ್ಲೂ ಮಾಲಿನ್ಯ ಹೆಚ್ಚಳವಾಗಿದೆ.

RELATED ARTICLES
- Advertisment -
Google search engine

Most Popular