ಚಳ್ಳಕೆರೆ: ತಾಲ್ಲೂಕಿನ ಮೈಲನಹಳ್ಳಿಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಹಲವು ಮನೆಗಳಲ್ಲಿ ನೋಪಿ ಗೌರಿಯನ್ನ ಪ್ರತಿಷ್ಠಾಪಿಸಿ ಸಂಭ್ರಮದಿಂದ ಹಬ್ಬವನ್ನ ಆಚರಿಸಿದರು. ತಳೀರು-ತೋರಣ, ಚೆಂಡು ಹೂಗಳಿಂದ ಅಲಂಕೃತಗೊಂಡ ಮಂಟಪದಲ್ಲಿ ನೊಂಪಿ ಗೌರಿಯ ಕಳಸವನ್ನು ಒಡವೆ ವಸ್ತ್ರಗಳು, ವಿಶೇಷ ಹೂವುಗಳಿಂದ ಅಲಂಕರಿಸಿ, ಪ್ರತಿಷ್ಠಾಪಿಸಿ, ಕುಟುಂಬ ಸದಸ್ಯರೆಲ್ಲರೂ ಸೇರಿ ಪೂಜಿಸಿದರು. ನಂತರ ಗುರುಗಳ ಪಾದಪೂಜೆಯನ್ನು ನೆರವೇರಿಸಿದರು.
ಕೇದಾರೇಶ್ವರ ವ್ರತ, ಜಗನ್ಮಾಥೆ ದೇವಿರಮ್ಮ ದೇವಿಯ ಆರಾಧನೆ ಪ್ರಯುಕ್ತ, ಚಿಗಳಿ-ತಂಬಿಟ್ಟುಗಳ ಮಹಾ ಆರತಿ, ತುಂಬೆ ಹೂವಿನ ಅಲಂಕಾರ ಮಂಗಲಾರುತಿ ನಡೆಯಿತು. ಗ್ರಾಮದ ಚನ್ನವೀರಪ್ಪ, ಸರಳ ಮೆರವಣಿಗೆಯಲ್ಲಿ ಮೈಲನಹಳ್ಳಿ ದಿನೇಶ್, ಅಶೋಕ್, ಸತೀಶ್, ಕರಿಬಸವರಾಜ್, ಭರತ್ ಪಟೇಲ್, ವಸಂತ್, ಬಸವರಾಜ್, ಜಯಚಂದ್ರಪ್ಪ, ಅಭಿಲಾಷ್, ತ್ಯಾಗರಾಜ್, ದರ್ಶನ್, ನಿಖಿಲ್, ಈಶ್ವರಪ್ಪ, ಮಕ್ಕಳು ಇದ್ದರು.
