Sunday, April 20, 2025
Google search engine

Homeರಾಜಕೀಯಪೇಪರ್, ಪೆನ್ನು ಕೇಳಿದ ಡಿ.ಕೆ.ಶಿವಕುಮಾರ್ ನಿಮ್ಮ ಕೊಡುಗೆ ಏನು ?: ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ಪೇಪರ್, ಪೆನ್ನು ಕೇಳಿದ ಡಿ.ಕೆ.ಶಿವಕುಮಾರ್ ನಿಮ್ಮ ಕೊಡುಗೆ ಏನು ?: ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ಮಂಡ್ಯ: ಹೆಚ್.ಡಿ.ದೇವೇಗೌಡರು  ಹೇಮಾವತಿ ಡ್ಯಾಂ ಕಟ್ಟಿಸಿದ್ರು. ನಾಗಮಂಗಲ, ಕೆ.ಆರ್.ಪೇಟೆ, ಪಾಂಡವಪುರ ಭಾಗಕ್ಕೆ ನೀರು ಸಿಗುತ್ತಿದೆ. ಪೇಪರ್, ಪೆನ್ನು ಕೇಳಿದ ಡಿ.ಕೆ.ಶಿವಕುಮಾರ್ ನಿಮ್ಮ ಕೊಡುಗೆ ಏನು ? ಬೆಂಗಳೂರಿನಲ್ಲಿ ಚದರ ಅಡಿಗೆ 100 ರೂ. ಫಿಕ್ಸ್ ಮಾಡಿಕೊಳ್ಳಲು ಪೆನ್ನು, ಪೇಪರ್ ಬಳಸಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ಮಂಡ್ಯದಲ್ಲಿ ಮಾತನಾಡಿದ ಅವರು, 2019ರಲ್ಲಿ ಕಾಂಗ್ರೆಸ್ ನಾಯಕರು ನಮ್ಮ ಮನೆ ಬಾಗಿಲಿಗೆ ಬಂದರು. ಖರ್ಗೆ ಸೇರಿದಂತೆ ಯಾರನ್ನಾದರೂ ಸಿಎಂ ಮಾಡಿ ಅಂತ ಹೆಚ್.ಡಿ.ದೇವೇಗೌಡರು ಹೇಳಿದ್ದರು. ಡೆಲ್ಲಿ ನಾಯಕರು ನನ್ನ ಮೇಲೆ ಒತ್ತಡ ಹಾಕಿದ್ರು.  ಆದ್ರೆ ಅಧಿಕಾರ ಮಾಡೋಕೆ ಬಿಡಲಿಲ್ಲ  ಎಂದಿದ್ದಾರೆ.

ನಮ್ಮ ತೆರಿಗೆ ನಮ್ಮ ಹಕ್ಕು ಅಂತ ಸಿಎಂ ಕೇಳುತ್ತಾರೆ.  ನಾನು ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರದ ಮುಂದೆ ಕೈಚಾಚಲಿಲ್ಲ. ಸಾಲ ಮನ್ನಾ ಮಾಡಿ ತೋರಿಸಿದ್ದೇನೆ.

ನಮ್ಮ ನೀರು ನಮ್ಮ ಹಕ್ಕು ಅಂತ ಮೇಕೆದಾಟುವರೆಗೆ ಪಾದಯಾತ್ರೆ ಮಾಡಿದ್ರು. ಮಂಡ್ಯದ ಕಬ್ಬು ಒಣಗುತ್ತಿದೆ. ಇದಕ್ಕೆ ಯಾರು ಕಾರಣ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ. ಭತ್ತ ನಾಟಿ ಮಾಡಬೇಡಿ ಅಂತ ಪ್ರಥಮ ಬಾರಿಗೆ ಹೇಳಿದ ಕೃಷಿ ಸಚಿವ ಚಲುವರಾಯಸ್ವಾಮಿ ಎಂದು ಪ್ರಶ್ನಿಸಿದರು.

ಇದು ದೇವರ ಸಭೆ, ನಾನು ವೈಯಕ್ತಿಕ ಸ್ಥಾನಮಾನಕ್ಕೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿಲ್ಲ. ನೀನೇ ನಿಲ್ಲಬೇಕು ಎಂದು ಹಿರಿಯರ ಒತ್ತಡ ಹಾಕಿದ್ರು. ಕಾರ್ಯಕರ್ತರು ನೀವು ಬರಲಿಲ್ಲ ಅಂದ್ರೆ ಸಂಜಯ್ ಸರ್ಕಲ್‌ನಲ್ಲಿ ನೇಣು ಹಾಕಿಕೊಳ್ಳುತ್ತೇವೆ ಅಂದ್ರು. ಇದಕ್ಕಾಗಿ ಮಂಡ್ಯ ಜಿಲ್ಲೆಗೆ ಬಂದಿದ್ದೇನೆ ಎಂದರು.

ಮಂಡ್ಯ ಜಿಲ್ಲೆಯ ಜನರಿಗೆ ಮನವಿ ಮಾಡುತ್ತೇನೆ.‌ ನಿಮ್ಮ ಧ್ವನಿಯಾಗಿ ಕಾವೇರಿ,  ಮೇಕೆದಾಟು, ಭದ್ರ ಯೋಜನೆಗಳಿಗೆ ಅನುದಾನ ತರುತ್ತೇನೆ. ನರೇಂದ್ರ ಮೋದಿ ಮುಂದೆ ನಿಮ್ಮ ಅಹವಾಲು ಮಂಡಿಸುತ್ತೇನೆ. ನಮ್ಮ ಮೇಲೆ‌ ವಿಶ್ವಾಸ ಇಡಿ. ದೊಡ್ಡ ಕೈಗಾರಿಕೆ, ಶಿಕ್ಷಣ ಸಂಸ್ಥೆ ಕಟ್ಟಿಲ್ಲ. ಚಿತ್ರರಂಗದ ಹಂಚಿಕೆದಾರನಾಗಿ 1983ರಲ್ಲಿ ಬಿಡದಿಯಲ್ಲಿ 40 ಎಕರೆ ಜಮೀನು ಮಾಡಿದ್ದೇನೆ.  ಬೇರೆ ಯಾವುದೇ ಆಸ್ತಿ ಮಾಡಿಲ್ಲ.  ಸಿಎಂ ಆಗಿ ಪಾಪದ ಹಣ ಸಂಪಾದನೆ ಮಾಡಿಲ್ಲ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular