Saturday, April 19, 2025
Google search engine

Homeರಾಜ್ಯಡಿ ಕೆ ಸುರೇಶ್​ ಆಪ್ತ, ಮಾಜಿ ಕಾರ್ಪೊರೇಟರ್ ಮನೆ ಮೇಲೆ ಐಟಿ ದಾಳಿ: ಕಾಂಗ್ರೆಸ್ ಕಾರ್ಯಕರ್ತರ...

ಡಿ ಕೆ ಸುರೇಶ್​ ಆಪ್ತ, ಮಾಜಿ ಕಾರ್ಪೊರೇಟರ್ ಮನೆ ಮೇಲೆ ಐಟಿ ದಾಳಿ: ಕಾಂಗ್ರೆಸ್ ಕಾರ್ಯಕರ್ತರ ಧರಣಿ

ಬೆಂಗಳೂರು: ಡಿ ಕೆ ಸುರೇಶ್  ಆಪ್ತ ಹಾಗೂ ಕೋಣನಕುಂಟೆ ಬ್ಲಾಕ್ ಮಾಜಿ ಕಾರ್ಪೊರೇಟರ್ ಗಂಗಾಧರ್ ಎಂಬುವವರ​ ಮನೆ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಇಂದು(ಏ.24) ಬೆಳಿಗ್ಗೆ   ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಸತತ 8 ಗಂಟೆಯಿಂದ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಇನ್ನು ಈ ಕುರಿತು ವಿಷಯ ತಿಳಿಯುತ್ತಿದ್ದಂತೆ ಮಾಜಿ ಕಾರ್ಪೊರೇಟರ್ ಗಂಗಾಧರ್ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿ ಧರಣಿ ನಡೆಸಿದ್ದಾರೆ.

ಜೊತೆಗೆ ಡಿಕೆ ಸುರೇಶ್ ಅವರನ್ನು ಟಾರ್ಗೆಟ್ ಮಾಡಿ ಅವರ ಆಪ್ತರ ಮೇಲೆ ಐಟಿ ದಾಳಿ ಮಾಡುತ್ತಿದ್ದಾರೆ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.

ಈ ಹಿನ್ನಲೆ ಕೋಣನಕುಂಟೆ, ಅಂಜಾನಪುರ ಹಾಗೂ ಅವಲಹಳ್ಳಿ ಭಾಗದಲ್ಲಿ ಬೆಳಿಗ್ಗೆಯಿಂದ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular