Friday, April 4, 2025
Google search engine

Homeರಾಜಕೀಯಡಿಕೆ ಸುರೇಶ್ ‌'ಪ್ರತ್ಯೇಕ ರಾಷ್ಟ್ರʼ ಹೇಳಿಕೆ: ನರೇಂದ್ರಸ್ವಾಮಿ ಸಮರ್ಥನೆ

ಡಿಕೆ ಸುರೇಶ್ ‌’ಪ್ರತ್ಯೇಕ ರಾಷ್ಟ್ರʼ ಹೇಳಿಕೆ: ನರೇಂದ್ರಸ್ವಾಮಿ ಸಮರ್ಥನೆ

ಮೈಸೂರು: ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲವಾದ್ದರಿಂದ, ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮುಂದಿಡಬೇಕಾಗುತ್ತದೆ ಎಂಬ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿಕೆಯನ್ನು ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಸಮರ್ಥಿಸಿಕೊಂಡರು.

ಇಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ರಾಜ್ಯಕ್ಕೆ ಅನ್ಯಾಯವಾಗಿದೆ. ಅದರ ವಿರುದ್ಧ ಧ್ವನಿ ಎತ್ತಿರುವ ಏಕೈಕ ಗಂಡು ಅವರು. ಅನ್ಯಾಯ ಆಗಿರುವ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅದರಲ್ಲಿ ನನಗೇನು ತಪ್ಪು ಕಾಣಿಸುತ್ತಿಲ್ಲ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯಿಂದ ಈ ರಾಜ್ಯಕ್ಕೆ ಅನ್ಯಾಯವಾಗಿದೆ. ಅದನ್ನು ಯಾವ ಸಂಸದರೂ ಪ್ರಶ್ನಿಸಿಲ್ಲ. ಕೇಳಿರುವುದು ಸುರೇಶ್ ಮಾತ್ರ. ಅವರು ಈ ಪ್ರಶ್ನೆಯನ್ನು ಏಕೆ ಎತ್ತಿದ್ದಾರೆ ಎಂಬುದರ ಬಗ್ಗೆ ಚರ್ಚೆಯಾಗಬೇಕು’ ಎಂದರು.

‘ಕೆರಗೋಡು ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಆಡಳಿತಾತ್ಮಕವಾಗಿಯೂ ಕೆಲ ಲೋಪವಾಗಿವೆ. ಅದನ್ನು ಕೆಲವರು ಪ್ರಚೋದಿಸಲು ಬಳಸುತ್ತಿದ್ದಾರೆ. ನಮಗೆ ರಾಷ್ಟ್ರ ಧ್ವಜ ಮಾತ್ರವೇ ಮುಖ್ಯ. ಕೆರಗೋಡಿನಲ್ಲಿ ಹನುಮ ಧ್ವಜ ಅಳವಡಿಸಲು ಬಿಟ್ಟರೇಕೆ?, ಎಲ್ಲಿ‌ ಲೋಪವಾಗಿದೆ ಎಂಬುದರ ಬಗ್ಗೆ ಪರಿಶೀಲಿಸುತ್ತಿದ್ದೇವೆ’ ಎಂದು ಹೇಳಿದರು.

‘ಕೆರಗೋಡಿನಲ್ಲಿ ಶಾಂತಿ ಸಭೆ ನಡೆಸಬೇಕಿದ್ದು, ಅದಕ್ಕಿನ್ನೂ ಕಾಲ ಪಕ್ವವಾಗಿಲ್ಲ. ಹಿಂದೂ ಧರ್ಮ ಹಾಗೂ ದೇವರ ಬಗ್ಗೆ ನಮಗೂ ಭಕ್ತಿ ಇದೆ‌. ನಾವೂ ನಿತ್ಯ ಬೆಳಿಗ್ಗೆ ಪೂಜೆ ಮುಗಿಸಿದ ಬಳಿಕವೇ ಮನೆಯಿಂದ ಹೊರಡುತ್ತೇವೆ. ಜೆಡಿಎಸ್‌–ಬಿಜೆಪಿಯವರಿಂದ ಹಿಂದುತ್ವದ ಪಾಠ ಕಲಿಯಬೇಕಿಲ್ಲ’ ಎಂದರು.

RELATED ARTICLES
- Advertisment -
Google search engine

Most Popular