Friday, May 29, 2026
Google search engine

Homeರಾಜಕೀಯಮೊಮ್ಮಗಳ ಅದೃಷ್ಟದಿಂದ ಡಿಕೆಶಿಗೆ ಸಿಎಂ ಭಾಗ್ಯ : ರಾಜಗುರು ದ್ವಾರಕನಾಥ್ ಗುರೂಜಿ

ಮೊಮ್ಮಗಳ ಅದೃಷ್ಟದಿಂದ ಡಿಕೆಶಿಗೆ ಸಿಎಂ ಭಾಗ್ಯ : ರಾಜಗುರು ದ್ವಾರಕನಾಥ್ ಗುರೂಜಿ

ಬೆಂಗಳೂರು : ಮೊಮ್ಮಗಳು ತಂದ ಅದೃಷ್ಟವೂ ಇದೆ, ಜಾತಕ ಫಲನೂ ಇದೆ ಎಂದು ಡಿಕೆ ಶಿವಕುಮಾರ್‌ಗೆ ಸಿಎಂ ಭಾಗ್ಯ ಸಿಕ್ಕಿರುವ ಬಗ್ಗೆ ರಾಜಗುರು ದ್ವಾರಕನಾಥ್ ಗುರೂಜಿ ಮಾತನಾಡಿದ್ದಾರೆ.

40 ವರ್ಷದ ಹಿಂದೆ ಡಿಕೆಗೆ ನಾನು ಭವಿಷ್ಯ ಹೇಳಿದ್ದೆ. ನೀನು ಸಿಎಂ ಆಗ್ತೀಯಾ ಅಂತಾ ಹೇಳಿದ್ದೆ. ಈಗ ಆ ಕಾಲ ಕೂಡಿ ಬಂದಿದೆ ಎಂದು ಗುರೂಜಿ ಹೇಳಿದ್ದಾರೆ.

ಡಿಕೆಶಿಗೆ ಮೊಮ್ಮಗಳು ತಂದ ಅದೃಷ್ಟವೂ ಇದೆ, ಜಾತಕ ಫಲನೂ ಇದೆ. ತಟ್ಟೆಯಲ್ಲಿ ರಾಜಲಕ್ಷ್ಮಿಯನ್ನು ತಂದು ಅಜ್ಜನಿಗೆ ನೀಡಿದ್ದಾಳೆ. ಡಿಕೆಗೆ ಮೊಮ್ಮಗಳು ಜನಿಸಿದ ಬೆನ್ನಲ್ಲೆ ಭಾಗ್ಯದ ಬಾಗಿಲು ತೆರೆದಿದೆ ಎಂದು ತಿಳಿಸಿದ್ದಾರೆ.

ಪ್ರಮಾಣವಚನ ಸ್ವೀಕಾರಕ್ಕೆ ಈಗಾಗಲೇ ಮೂರು-ನಾಲ್ಕು ದಿನದ ಮುಹೂರ್ತ ಕೊಟ್ಟಿದ್ದೇನೆ. ನಾಳೆ ಹಾಗೂ ಜೂನ್ 5, 6, 7 ದಿನ ಚೆನ್ನಾಗಿದೆ ಅಂತಾ ಹೇಳಿದ್ದೇನೆ. 2027 ರವರೆಗೆ ಡಿಕೆಶಿಗೆ ಸಮಸ್ಯೆ ಇಲ್ಲ. ಅಧಿಕಾರವನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗ್ತಾರೆ. ಆದರೆ, ಎಚ್ಚರಿಕೆಯಿಂದ ಇರುವಂತೆಯೂ ಹೇಳಿದ್ದೇನೆ ಎಂದಿದ್ದಾರೆ.

RELATED ARTICLES
- Advertisment -
Google search engine

Most Popular