ಪಾಂಡವಪುರ:ಮೇಲುಕೋಟೆ ಶ್ರೀಚಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲಾ ಆಸ್ತಿಯನ್ನು ಸರ್ವೇ ಮಾಡಿಸಿ ಕ್ರಮವಹಿಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಮೇಲುಕೋಟೆ ಹೋಬಳಿಯ ಬಳಘಟ್ಟ, ಮೇಲುಕೋಟೆ ಹಾಗೂ ಜಕ್ಕನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿಕೊಟ್ಟು ಗ್ರಾಮಗಳ ಸಮಸ್ಯೆ ಆಲಿಸಿ ಬಳಿಕ ಮಾಧ್ಯಮದವ
ರೊಂದಿಗೆ ಮಾತನಾಡಿದರು.
ಮೇಲುಕೋಟೆಯಲ್ಲಿ ಸಾಕಷ್ಡು ಅಕ್ರಮ ಕಾಮಗಾರಿಗಳು ನಡೆದಿವೆ, ಜತೆಗೆ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗ ಒತ್ತುವರಿಯಾಗಿ ಸಾಕಷ್ಟು ಕಟ್ಟಡಗಳು ನಿರ್ಮಾಣಗೊಂಡಿವೆ, ಅಲ್ಲದೆ ಅಕ್ರಮವಾಗಿ ನಿವೇಶನಗಳು ಹಂಚಿಕೆಯಾಗಿದ್ದು,ಇವುಗಳ ಬಗ್ಗೆ ತನಿಖೆ ನಡೆಸಲು ಕ್ರಮವಹಿಸಲಾಗಿದೆ. ಜತೆಗೆ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲಾ ಆಸ್ತಿಗಳನ್ನು ಸರ್ವೇ ಮಾಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಶ್ರೀಚಲುವನಾರಾಯಣಸ್ವಾಮಿ ದೇವಸ್ಥಾನದ ಸುತ್ತಲು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮವಹಿಸಿ ಎಲ್ಲಾದರು ಒಂದು ಕಡೆಯಲ್ಲಿ ಬರುವ ಭಕ್ತರಿಗೆ ಪ್ರಸಾದ್ ವಿತರಣೆ ಮಾಡಲು ಕ್ರಮವಹಿಸಲಾಗುವುದು. ಮೇಲುಕೋಟೆಯಲ್ಲಿ ೧೦೮ ಕಲ್ಯಾಣಿಕೊಳಗಳು ಇದ್ದವು ಎನ್ನುವ ಮಾಹಿತಿ ಇದೆ, ಅದರಲ್ಲಿ ಕೆಲವು ಮುಚ್ಚಿಹೋಗಿವೆ ಅವುಗಳ ರಕ್ಷಣೆ ಮಾಡುವ ಸಂಬಂಧವು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಕೆವೈಸಿ ಮಾಡಿಸಲು ಕ್ರಮ: ಸಾರ್ವಜನಿಕರು, ರೈತರು ಸರಕಾರಗಳ ಸೌಲಭ್ಯಗಳನ್ನು ಪಡೆಯಲು ಕಡ್ಡಾಯವಾಗಿ ತಮ್ಮ ಕೆವೈಸಿ ದಾಖಲೆಗಳನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಲು ಇದೇ ಜುಲೈ.೩೦ ಕೊನೆಯ ದಿನವಾಗಿರುವುದರಿಂದ ಎಲ್ಲಾ ತಾಲೂಕಿನ ರೈತರು ಸಾರ್ವಜನಿಕರಿಗೆ ಇದೇ.ಜುಲೈ.೨೪ರಂದು ಶನಿವಾರ ತಾಲೂಕಿನ ಎಲ್ಲಾ ಗ್ರಾಪಂನಲ್ಲಿ ಬೆಳಿಗ್ಗೆ.೯ ಗಂಟೆಯಿಂದ ಸಂಜೆ ೫ ಗಂಟೆಯ ವರೆಗೆ ಕೆವೈಸಿ ದಾಖಲೆಗಳನ್ನು ಲಿಂಕ್ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೀಗಾಗಲೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು,ಎಲ್ಲರು ಕಡ್ಡಾಯವಾಗಿ ಕೆವೈಸಿ ದಾಖಲೆಗಳನ್ನು ಆಧಾರ್ ಲಿಂಕ್ ಮಾಡಬೇಕು ಎಂದು ಮನವಿ ಮಾಡಿದರು.
ಹಳ್ಳಿಹಳ್ಳಿಗೆ ಭೇಟಿ: ಬಳಘಟ್ಟ, ಮೇಲುಕೋಟೆ ಹಾಗೂ ಜಕ್ಕನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಿಗೆ ಭೇಟಿಕೊಟ್ಟ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ಥಳೀಯವಾಗಿ ಗ್ರಾಮದಲ್ಲಿ ಇರುವ ಸಮಸ್ಯೆಗಳನ್ನು ಆಲಿಸಿದರು. ಗ್ರಾಮಕ್ಕೆ ಆಗಮಿಸಿದ ಶಾಸಕರಿಗೆ ಸಾರ್ವಜನಿಕರು ತಮ್ಮ ಗ್ರಾಮಕ್ಕೆ ಅಗತ್ಯವಾಗಿ ಆಗಬೇಕಿರುವ ಮೂಲಭೂತ ಸಮಸ್ಯೆಗಳನ್ನು ಗಮನಕ್ಕೆ ತಂದರು.ನಾರಾಯಣಾ
ಪುರ ಗ್ರಾಮದಲ್ಲಿ ಜಲಜೀವನ್ ಮಿಷನ್ ನಡಿಯಲ್ಲಿ ನಡೆಸಲಾಗಿರುವ ಕಾಮಗಾರಿ ಕಳಪೆಯಿಂದ ಕೂಡಿದೆ ಈ ಬಗ್ಗೆ ತನಿಖೆ ನಡೆಸಿ ಕ್ರಮವಹಿಸಬೇಕಾಗಿದೆ ಎಂದು ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು.ಕನಗೋನಹಳ್ಳಿ ಹಾಗೂ ಬಳಘಟ್ಟ ಗ್ರಾಮದಲ್ಲಿ ಸರಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿದರು.
ಸಂದರ್ಭದಲ್ಲಿ ಮನ್ ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು,ಮುಖಂಡರಾದ ಕನಗೋನಹಳ್ಳಿ ಪರಮೇಶ್ ಗೌಡ, ಹೊಸಕೋಟೆ ವಿಜಿಕುಮಾರ್, ದೀಪು(ಲೋಹಿತ್), ರಘು, ವೆಂಕಟರಾಮೇಗೌಡ,ಬಳಘಟ್ಟ ಗ್ರಾಪಂ ಅಧ್ಯಕ್ಷ ಜಯರಾಮು, ವಿಎ ರಮೇಶ್ ಸೇರಿದಂತೆ ಹಲವರು ಹಾಜರಿದ್ದರು.