Thursday, July 3, 2025
Google search engine

Homeರಾಜ್ಯಸುದ್ದಿಜಾಲಪ್ರತಿದಿನ ತಪ್ಪದೇ ಯೋಗ ಮಾಡಿ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ : ರುಕ್ಮಿಣಿ...

ಪ್ರತಿದಿನ ತಪ್ಪದೇ ಯೋಗ ಮಾಡಿ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ : ರುಕ್ಮಿಣಿ ಡಿ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಪ್ರತಿದಿನ ತಪ್ಪದೇ ಯೋಗ ಮಾಡಿ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿ ವಿಜೇತ ರುಕ್ಮಿಣಿ ಡಿ ಹೇಳಿದರು. ಪಟ್ಟಣದ ಸ್ಪಿನ್ ಯೋಗ ಕೇಂದ್ರದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು ನಾವು ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡುವುದರಿಂದ ನಮ್ಮ ದೈನಂದಿನದ ಚಟುವಟಿಕೆಗಳನ್ನು ಅತ್ಯಂತ ಉತ್ಸಾಹದಿಂದ ಮಾಡಬಹುದು ಜೊತೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದ ಇರುವುದಕ್ಕೆ ನಾವು ಪ್ರತಿನಿತ್ಯ ಯೋಗವನ್ನು ಆಭ್ಯಾಸಮಾಡಬೇಕೆಂದು ತಿಳಿಸಿದರು.

ಪಟ್ಟಣದ ಸ್ಪಿನ್ ಯೋಗಕೇಂದ್ರದಲ್ಲಿ ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡುತ್ತಿದ್ದು ಈ ಬಾರಿ ಶ್ರೀ ಬಸವಲಿ ಯೋಗ ಪ್ರತಿಷ್ಠಾನ ನಂಜನಗೂಡು ಮೈಸೂರು ಶಂಕರಪುರ ಪೈಲ್ವಾನ್ ಯಜಮಾನ ಶ್ರೀ ಬಸವರಾಜು ರವರ ಸ್ಮರಣಾರ್ಥ ಮೈಸೂರಿನಲ್ಲಿ ನಡೆದ ಅಂತರರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಮುಕ್ತ ಯೋಗಹಾಸನ ಸ್ಪರ್ಧೆಯಲ್ಲಿ ಸ್ಪಿನ್ ಯೋಗ ಕೇಂದ್ರದ ಯೋಗ ಪಟ್ಟುಗಳು ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ರುಕ್ಮಿಣಿ ಡಿ ದ್ವಿತೀಯ ಸ್ಥಾನ, ಸ್ಪಿನ್ ಕೃಷ್ಣ ೫ನೇ ಸ್ಥಾನ, ಸ್ಪಿನ್ ಅಶ್ವಿನಿ ೫ನೇ ಸ್ಥಾನ, ಅನಿತಾ ಇ ಡಿ ಐದನೇ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದು ಇವರನ್ನು ಉಪನ್ಯಾಸಕರಾದ ಸುರೇಶ್ ಚೌಹಾಣ್, ಐಶ್ವರ್ಯ, ಲಿಖಿತ್ ಸುಬ್ರಮಣ್ಯ, ಸ್ಪಿನ್ ಕಂಪ್ಯೂಟರ್ ಸಂಸ್ಥೆಯ ಶಿಕ್ಷಕರು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

RELATED ARTICLES
- Advertisment -
Google search engine

Most Popular