Friday, April 11, 2025
Google search engine

Homeಆರೋಗ್ಯಬೆಳಿಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಮೊಬೈಲ್ ನೋಡುವ ಹವ್ಯಾಸವಿದೆಯೇ? ಹುಷಾರು? ಕಣ್ಣಿನ ಆರೋಗ್ಯದ ಜೊತೆಗೆ ಮಾನಸಿಕ...

ಬೆಳಿಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಮೊಬೈಲ್ ನೋಡುವ ಹವ್ಯಾಸವಿದೆಯೇ? ಹುಷಾರು? ಕಣ್ಣಿನ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ತೊಂದರೆ…..

ನಮ್ಮಲ್ಲಿ ಹೆಚ್ಚಿನವರು ಬೆಳಿಗ್ಗೆ ಎದ್ದ ತಕ್ಷಣ ಫೋನ್ ಅನ್ನು ಪರೀಕ್ಷಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರು ಮುಂಜಾನೆಯಿಂದ ಮಧ್ಯರಾತ್ರಿಯವರೆಗೆ ಫೋನ್‌ನಲ್ಲಿ ಸಮಯ ಕಳೆಯುತ್ತಾರೆ. ಆದರೆ ಈ ಅಭ್ಯಾಸ ಕಣ್ಣಿನ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ.
ಬೆಳಗ್ಗೆ ನಿದ್ದೆಯಿಂದ ಎದ್ದ ತಕ್ಷಣ ನೀವು ಮೊಬೈಲ್​​ ಫೋನ್​​ ನೋಡುತ್ತಿರುವಿರಾ? ಆದರೆ ಜಾಗರೂಕರಾಗಿರಿಬೆಳಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಮೊಬೈಲ್​​ ಫೋನ್​​ ನೋಡುತ್ತಿರುವಿರಾ? ಆದರೆ ಜಾಗರೂಕರಾಗಿರಿ

ಕೈಗೆ ಸ್ಮಾರ್ಟ್ ಫೋನ್ (Smart Phone) ಸಿಕ್ಕಿದ ಮೇಲೆ ಎಲ್ಲರೂ ಮೊಬೈಲ್ ಫೋನಲ್ಲೇ ತಲೆ ಮರೆಸಿಕೊಂಡು ಜಗತ್ತನ್ನೇ ಮರೆಯುತ್ತಿದ್ದಾರೆ. ಒಂದು ನಿಮಿಷ ಫೋನ್ ಕೈಗೆ ಸಿಗದಿದ್ದರೆ ಏನೋ ಕಳೆದುಕೊಂಡಂತೆ ಚಡಪಡಿಸುತ್ತಾರೆ. ಇದ್ದಕ್ಕಿದ್ದಂತರೆ ಇಂಟರ್ನೆಟ್ ಸ್ಥಗಿತಗೊಂಡರೆ ಇಡೀ ಜಗತ್ತೇ ಸ್ತಬ್ಧವಾದಂತೆ ಸಿಡಿಮಿಡಿಗೊಳ್ಳುತ್ತಾರೆ. ಕೆಲವರು ಮುಂಜಾನೆಯಿಂದ ತಡರಾತ್ರಿಯವರೆಗೆ ಫೋನ್‌ನಲ್ಲಿಯೇ ಸಮಯ ಕಳೆದುಬಿಡುತ್ತಿದ್ದಾರೆ. ಅಂತಹವರು ಫೋನ್ ಮತ್ತು ಇಂಟರ್ನೆಟ್‌ ವ್ಯಸನಿಯಾಗುತ್ತಿದ್ದಾರೆ ಎಂದೇ ಅರ್ಥ. ನಮ್ಮಲ್ಲಿ ಹೆಚ್ಚಿನವರು ಬೆಳಿಗ್ಗೆ ಎದ್ದ ತಕ್ಷಣ ಫೋನ್ ಅನ್ನು ವೀಕ್ಷಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ಅಭ್ಯಾಸವು ಒಳ್ಳೆಯದಲ್ಲ…

ಕೆಲವರು ಮುಂಜಾನೆಯಿಂದ ಮಧ್ಯರಾತ್ರಿಯವರೆಗೆ ಫೋನ್‌ನಲ್ಲಿ ಸಮಯ ಕಳೆಯುತ್ತಾರೆ. ಅವರು ಫೋನ್ ಮತ್ತು ಇಂಟರ್ನೆಟ್‌ಗೆ ವ್ಯಸನಿಯಾಗುತ್ತಿದ್ದಾರೆ. ನಮ್ಮಲ್ಲಿ ಹೆಚ್ಚಿನವರು ಬೆಳಿಗ್ಗೆ ಎದ್ದ ತಕ್ಷಣ ಫೋನ್ ಅನ್ನು ಪರೀಕ್ಷಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ಅಭ್ಯಾಸ ಕಣ್ಣಿನ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.

ಇತ್ತೀಚಿನ ಅಧ್ಯಯನಗಳು ಫೋನ್‌ನಲ್ಲಿ ನೋಟಿಫಿಕೇಶನ್​​ಗಳು ಮತ್ತು ಜಗತ್ತಿನಾದ್ಯಂತದ ಕೆಟ್ಟ ಸುದ್ದಿಗಳು ದಿನವಿಡೀ ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಬಹಿರಂಗಪಡಿಸಿದೆ. ಇನ್ನು ನಿದ್ದೆಯಿಂದ ಎದ್ದ ತಕ್ಷಣ ಸಮಯ ಎಷ್ಟು ಅಂತ ನೋಡಲು, ಅಥವಾ ಅಲಾರಾಂ ನಿಲ್ಲಿಸಲು ಸಹ ಸಬೂಬು ಸಿಗಬಹುದು. ಆದರೆ ಅದಕ್ಕಾಗಿ ಪರ್ಯಾಯ ಮಾರ್ಗಗಳನ್ನು ಅನುಸರಿಸುವುದು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು.

ನೀವು ಬೆಳಿಗ್ಗೆ ಎದ್ದಾಗ ನಿಮ್ಮ ಫೋನ್ ಅನ್ನು ಪರಿಶೀಲಿಸುವ ಬದಲು, ನಿಮ್ಮ ಹಾಸಿಗೆಯ ಪಕ್ಕದ ಮೇಜಿನ ಮೇಲೆ ಗಡಿಯಾರವನ್ನು ಇಟ್ಟುಕೊಳ್ಳಿ ಮತ್ತು ಅಲಾರಾಂ ಗಡಿಯಾರವನ್ನು ಹೊಂದಬಹುದು. ಅಲ್ಲದೆ, ನಿಮ್ಮ ಫೋನ್‌ನಲ್ಲಿ ಎದ್ದಾಕ್ಷಣ ಸೋಷಿಯಲ್ ಮೀಡಿಯಾ ಪರಿಶೀಲಿಸದೆ ಉತ್ತಮ ಪುಸ್ತಕ, ಪತ್ರಿಕೆ ಅಥವಾ ಯಾವುದೇ ಮ್ಯಾಗಜೀನ್ ಓದುವ ಅಭ್ಯಾಸವನ್ನು ನೀವು ಮಾಡಿದರೆ, ನೀವು ಹೊಸ ವಿಷಯಗಳನ್ನು ಕಲಿಯುತ್ತೀರಿ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.

ಎದ್ದ ಮೇಲೆ ಸ್ವಲ್ಪ ಹೊತ್ತಿಗೆ ನಿತ್ಯಕರ್ಮಗಳನ್ನು ಮುಗಿಸಿಕೊಂ ಡು ಧ್ಯಾನ ಮಾಡಿದರೆ ದಿನವಿಡೀ ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಬೆಳಿಗ್ಗೆ ನಿಮ್ಮ ನೆಚ್ಚಿನ ಜನರೊಂದಿಗೆ ಸ್ವಲ್ಪ ಸಮಯ ಮಾತನಾಡಿ. ದಿನಕ್ಕೆ ಮಾಡಬೇಕಾದ ಕೆಲಸಗಳನ್ನು ಟಿಪ್ಪಣಿ ಮಾಡಿಕೊಳ್ಳುವ ಅಭ್ಯಾಸವನ್ನು ಮಾಡಿಕೊಳ್ಳುವುದು ಉತ್ತಮ ಮತ್ತು ಇತರ ಪ್ರಮುಖ ಕಾರ್ಯಗಳತ್ತ ಗಮನ ಹರಿಸುವುದರಿಂದ ಇತರ ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು ಮತ್ತು ನಿಮ್ಮ ದೈನಂದಿನ ಜೀವನವನ್ನು ಸಕ್ರಿಯವಾಗಿರಿಸಿಕೊಳ್ಳಬಹುದು.

RELATED ARTICLES
- Advertisment -
Google search engine

Most Popular