ಅಡುಗೆ ಕೋಣೆಯ ಶೆಲ್ಫ್ ನಮ್ಮ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಹಾಯ ಮಾಡುವ ವಸ್ತುಗಳಿಂದ ತುಂಬಿರುತ್ತದೆ. ಇವೆಲ್ಲವೂ ಒಂದಿಲ್ಲೊಂದು ಹಂತದಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಗಿಡಮೂಲಿಕೆಗಳು ಮತ್ತು ಮಸಾಲೆಗಳ ಬಗ್ಗೆ ನಾವು ಎಷ್ಟು ಚೆನ್ನಾಗಿ ತಿಳಿದಿದ್ದೇವೆ ಎಂಬುದರ ಮೇಲೆ ಅದನ್ನು ಹೇಗೆ ಬಳಸಬಹುದು ಎಂಬುದು ನಿರ್ಧಾರವಾಗುತ್ತದೆ. ಹಾಗಾಗಿ ಎಲ್ಲ ಮಸಾಲೆ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.
ಅನೇಕ ಪ್ರಯೋಜನಕಾರಿ ಪದಾರ್ಥಗಳ ಜೊತೆಗೆ ಅದೇ ಸಾಲಿಗೆ ಸೇರುವುದು ಕೇಸರಿ. ಹಲವಾರು ಕೇಸರಿಯ ಚಿನ್ನದ ಎಳೆಗಳನ್ನು ವಿಶ್ವದ ಅತ್ಯಂತ ದುಬಾರಿ ಮಸಾಲೆಗಳಲ್ಲಿ ಪರಿಗಣಿಸಲಾಗಿದೆ. ಸಾಕಷ್ಟು ಶ್ರಮ ವಹಿಸಿ ಕಷ್ಟ ಪಟ್ಟು ಕೊಯ್ಲು ಮಾಡುವುದರಿಂದ ಅದಲ್ಲದೆ ಇದರಲ್ಲಿ ಅತೀ ಹೆಚ್ಚು ಔಷಧಿ ಗುಣಗಳಿರುವುದರಿಂದ ಇದರ ಬೆಲೆಯೂ ಅಧಿಕ.
ಕೇಸರಿಯನ್ನು ಸಾಮಾನ್ಯವಾಗಿ ಕೇಸರಿ ಕ್ರೋಕಸ್ ಎಂದು ಕರೆಯಲ್ಪಡುವ ಕ್ರೋಕಸ್ ಸ್ಯಾಟಿವಸ್ ಹೂವಿನಿಂದ, ಕೈ ಯಿಂದ ಕೊಯ್ಲು ಮಾಡಲಾಗುತ್ತದೆ. “ಕೇಸರಿ” ಸುಂದರವಾದ ಬಣ್ಣದ ಜೊತೆಗೆ ಸಣ್ಣ ದಾರದಂತೆ ಕಂಗೊಳಿಸುವ ಇದನ್ನು ನೋಡುವುದೇ ಒಂದು ಚೆಂದ.
ಎನ್ಹೌಸ್ ಆಂಟಿ- ಆಕ್ಸಿಡೆಂಟ್: ಹೆಲ್ತ್ ಲೈನ್ ಪ್ರಕಾರ, ಕೇಸರಿ ಬೆಳೆಯುವ ಸಸ್ಯ ಹೆಚ್ಚು ಸಂಯುಕ್ತಗಳನ್ನು ಹೊಂದಿದೆ, ಅದು ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಜೀವಕೋಶಗಳು ಮತ್ತು ದೇಹವನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ.
ಖಿನ್ನತೆ ನಿವಾರಕವಾಗಿ ಕೇಸರಿ: ಈ ದುಬಾರಿ ಮಸಾಲೆಯು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕರಿ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಇದು ಮನಸ್ಥಿತಿಯನ್ನು ಸರಿಪಡಿಸಿ ಮತ್ತು ಖಿನ್ನತೆ ನಿವಾರಕವಾಗಿ ಕಾರ್ಯನಿರ್ವಹಿಸಲು ಸೂಕ್ತವೆಂದು ಪರಿಗಣಿಸಲಾಗಿದೆ. ಕೇಸರಿ ಏಕೆ ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತೀರ್ಮಾನಿಸಿದ ವಿವಿಧ ಅಧ್ಯಯನಗಳಿವೆ, ಜೊತೆಗೆ ಖಿನ್ನತೆ ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕೇಸರಿಯ ಸಕಾರಾತ್ಮಕ ಪರಿಣಾಮಗಳನ್ನು ಬೆಂಬಲಿಸಲು ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.
ಉತ್ತೇಜಕ ಟಾನಿಕ್: ಕೇಸರಿ ಒಂದು ಉತ್ತೇಜಕ ಟಾನಿಕ್ ಮತ್ತು ಶೀತ ಮತ್ತು ಜ್ವರಗಳಿಗೆ ಚಿಕಿತ್ಸೆ ನೀಡಲು ತುಂಬಾ ಪರಿಣಾಮಕಾರಿಯಾಗಿದೆ.
ರೋಗ ನಿರೋಧಕ ಶಕ್ತಿಗೆ ಒಳ್ಳೆಯದು: ಈ ಮಸಾಲೆ ಕ್ಯಾರೊಟಿನಾಯ್ಡ್ ಗಳಿಂದ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ. ಕೇಸರಿಯು ರಿಬೋಫ್ಲೇವಿನ್ ಮತ್ತು ವಿಟಮಿನ್ ಬಿ ಯ ಶ್ರೀಮಂತ ಮೂಲಗಳಲ್ಲಿ ಒಂದಾಗಿದೆ, ಇದು ಆರೋಗ್ಯಕರ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕಡಿಮೆ ಪಿಎಂಎಸ್ ರೋಗಲಕ್ಷಣಗಳು: ಆತಂಕ ಮತ್ತು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ನ ಕಡಿಮೆ ಮಾಡಲು ಮತ್ತು ಪಿಎಂಎಸ್ ರೋಗಲಕ್ಷಣಗಳ ಇಳಿಕೆಗೆ ಹೆಚ್ಚು ಸಹಾಯ ಮಾಡುತ್ತದೆ.
ಮೆಮೊರಿ ಫಂಕ್ಷನ್ : ಕೇಸರಿಯಲ್ಲಿ ಕ್ರೋಸಿನ್ ಮತ್ತು ಕ್ರೋಸೆಟಿನ್ ಎಂಬ ಎರಡು ರಾಸಾಯನಿಕಗಳಿವೆ, ಇದು ಅಧ್ಯಯನಗಳ ಪ್ರಕಾರ ಕಲಿಕೆ ಮತ್ತು ನೆನೆಪಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನಮ್ಮ ಆಹಾರಗಳಲ್ಲಿ ಎಲ್ಲಾ ಬಣ್ಣ ಮತ್ತು ಪರಿಮಳವನ್ನು ಸೇರಿಸುವುದರ ಜೊತೆಗೆ, ಕೇಸರಿಯ ಸಣ್ಣ ಭಾಗವನ್ನು ಸೇರಿಸುವುದರಿಂದ ಆರೋಗ್ಯ ಪ್ರಯೋಜನಗಳ ವಿಷಯದಲ್ಲಿ ಹಿಂದೆಂದೂ ಕಂಡಿರದ ಬೆಳವಣಿಗೆ ಕಂಡು ಬರುವುದರಲ್ಲಿ ಸಂಶಯವೇ ಇಲ್ಲ.