Raw Banana Benefits: ಬಾಳೆಕಾಯಿಯಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಇದ್ದು, ನಾರಿನಾಂಶ,ಫ್ಯಾಟಿ ಆಮ್ಲ ಪೊಟ್ಯಾಷಿಯಂ ಫೈಬರ್, ವಿಟಮಿನ್‌ಗಳು (ವಿಟಮಿನ್ ಸಿ ಮತ್ತು ವಿಟಮಿನ್ ಬಿ 6 , ಸೇರಿದಂತೆ ಅನೇಕ ಪೌಷ್ಟಿಕಾಂಶಗಳ್ನು ಹೊಂದಿದೆ.
- ಬಾಳೆ ಹಣ್ಣು ಮಾತ್ರವಲ್ಲ ಕಾಯಿ ಸಹ ಆರೋಗ್ಯಕ್ಕೆ ಒಳ್ಳೆದು.
- ಬಾಳೆಹಣ್ಣು ರುಚಿ ಕೊಡುವುದರಿಂದ ಕಾಯಿ ಸೇವೆನೆ ವಿರಳ.
- ಬಾಳೆಕಾಯಿ ಅನೇಕ ಪೋಷಕಾಂಶಗಳನ್ನು ಹೊಂದಿದೆ…
Health Tips: ಬಾಳೆಕಾಯಿಗಿಂತ ಹೆಚ್ಚಾಗಿ ಹಣ್ಣು ರುಚಿ ಕೊಡುವುದರಿಂದ ಕಾಯಿ ಸೇವೆನೆ ವಿರಳ. ಬಾಳೆಕಾಯಿ ಸ್ವಲ್ಪ ಒರಟಾಗಿರುವುದರಿಂದ ಇದನ್ನು ಹಾಗೆ ಸೇವಿಸಲು ಹಿತವೆನಿಸುವುದಿಲ್ಲ ಆದ್ದರಿಂದ ಇದನ್ನು ಹೆಚ್ಚಾಗಿ ಖಾದ್ಯ, ಸಾಂಬಾರ್ , ಚಿಪ್ಸ್‌ಗಳಲಾಗಿ ಬಳಸಲಾಗುತ್ತದೆ.
ಬಾಳೆಕಾಯಿಯಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಇದ್ದು, ನಾರಿನಾಂಶ,ಫ್ಯಾಟಿ ಆಮ್ಲ ಪೊಟ್ಯಾಷಿಯಂ ಫೈಬರ್, ವಿಟಮಿನ್‌ಗಳು (ವಿಟಮಿನ್ ಸಿ ಮತ್ತು ವಿಟಮಿನ್ ಬಿ 6 , ಸೇರಿದಂತೆ ಅನೇಕ ಪೌಷ್ಟಿಕಾಂಶಗಳ್ನು ಹೊಂದಿದೆ.
ಈ ಎಲ್ಲ ಅಂಶಗಳನ್ನು ಹೊಂದಿರುವ ಬಾಳೆಕಾಯಿ ಆರೋಗ್ಯದ ದೃಷ್ಠಿಯಿಂದ ಉತ್ತಮ ಆಹಾರವಾಗಿದೆ. ಕಾಯಿ ಬಾಳೆಯಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುವುದರಿಂದ ಮಧುಮೇಹಿಗಳು ಯಾವುದೇ ಭಯವಿಲ್ಲದೇ ಸೇವಿಸಬಹುದಾಗಿದೆ.
ಹಾಗೆಯೇ ನೀವು ತಿಂದ ಆಹಾರ ಜೀರ್ಣ ಆಗದೇ ಇದ್ದರೇ ಅಂಥಹ ಸಂದರ್ಭದಲ್ಲಿ ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸುಲಭವಾಗಿ ಆಗುತ್ತದೆ. ಎಲ್ಲಾದಕ್ಕಿಂತ ಹೆಚ್ಚಾಗಿ ಬಾಳೆಕಾಯಿಯಲ್ಲಿ ಮಳೆ ವಾತಾವರಣಕ್ಕೆ ಉತ್ತಮ ಎನಿಸುತ್ತದೆ ಮನೆಯಲ್ಲೇ ಇದರ ಚಿಪ್ಸ್ ಮಾಡಿ ಸೇವಿಸಲು ಬಹಳ ಉಪಯುಕ್ತವಾಗಿದೆ.
ಹಾಗೆಯೇ ಇದರ ಸೇವನೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಹೇಳಲಾಗಿದೆ. ಬಾಳೆಕಾಯಿ ಹೆಚ್ಚಿನ ಫೈಬರ್ ಅಂಶ ಇರುವುದಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ.