Monday, April 14, 2025
Google search engine

Homeಆರೋಗ್ಯಲವಂಗ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನಿಮಗೆ ಗೊತ್ತಾ?

ಲವಂಗ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನಿಮಗೆ ಗೊತ್ತಾ?

ನಮ್ಮ ಅಡುಗೆಮನೆಯಲ್ಲಿ ಕಂಡುಬರುವ ಸಾಮಾನ್ಯ ಮಸಾಲೆಗಳು ಅಂದ್ರೆ ಜೀರಿಗೆ, ಸಾಸಿವೆ, ಏಲಕ್ಕಿ, ದಾಲ್ ಚಿನ್ನಿ ಇದರಲ್ಲಿ ಲವಂಗ ಕೂಡ ಇರುತ್ತದೆ. ಅಡುಗೆಯಲ್ಲಿ ಬಳಕೆಯಗುವುದು ಮಾತ್ರವಲ್ಲದೇ, ಔಷಧಿಯಾಗಿಯೂ ಕೂಡ ಬಳಕೆ ಮಾಡಲಾಗುತ್ತದೆ.

ಪ್ರತಿ ದಿನ ನಿಯಮಿತವಾಗಿ ಲವಂಗವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಲವಂಗದಲ್ಲಿ ಔಷಧಿ ಗುಣಗಳಿರುವುದರಿಂದ ಆಯುರ್ವೇದದಲ್ಲಿ ಕೂಡ ಬಳಕೆ ಮಾಡಲಾಗುತ್ತದೆ.

ಲವಂಗದಲ್ಲಿ ರಂಜಕ, ಸೋಡಿಯಂ, ಪೊಟ್ಯಾಸಿಯಮ್, ವಿಟಮಿನ್ ಕೆ, ಫೈಬರ್, ಒಮೆಗಾ 3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್, ಕಬ್ಬಿಣ ಅಂಶ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಅಲ್ಲದೆ, ಲವಂಗವು ರೋಗನಿರೋಧಕ ಗುಣಲಕ್ಷಣಗಳನ್ನು ಸಹ ಹೊಂದಿದೆ.

ಲವಂಗವನ್ನು ರಾತ್ರಿಯ ಸಮಯದಲ್ಲಿ ಸೇವಿಸುವುದರಿಂದ ಬಹಳ ಪರಿಣಾಮಕಾರಿಯಾಗಿರುತ್ತದೆ. ರಾತ್ರಿ ಮಲಗುವ ಮೊದಲು ನೀವು 2 ಲವಂಗವನ್ನು ತಿಂದು ನಂತರ 1 ಗ್ಲಾಸ್ ಬಿಸಿನೀರನ್ನು ಕುಡಿಯಿರಿ, ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ಉರಿತ, ಕೀಲು ನೋವು ಮುಂತಾದ ಸಮಸ್ಯೆಗಳಿಗೆ ರಾಮಬಾಣವಾಗಿದೆ.

ಹಲ್ಲು ನೋವು ಅಥವಾ ಹಲ್ಲಿನಲ್ಲಿ ಹುಳುಕು ಸಮಸ್ಯೆ ಇದ್ದರೆ ರಾತ್ರಿ ಮಲಗುವ ಮುಂಚೆ ಎರಡು ಲವಂಗವನ್ನು ತೆಗೆದುಕೊಂಡು ಚೆನ್ನಾಗಿ ಅಗಿದು ,ಒಂದು ಲೋಟ ಬೆಚ್ಚಗಿನ ನೀರು ಕುಡಿಯುವುದರಿಂದ ಹಲ್ಲಿನ ನೋವಿನ ಸಮಸ್ಯೆ ನಿವಾರಣೆ ಆಗುತ್ತದೆ.

RELATED ARTICLES
- Advertisment -
Google search engine

Most Popular