ಗುಂಡ್ಲುಪೇಟೆ: ವೈದ್ಯರ ನಿರ್ಲಕ್ಷ್ಯಕ್ಕೆ ಅರು ತಿಂಗಳ ಗಂಡು ಮಗು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೊಮ್ಮಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ತಾಲ್ಲೂಕಿನ ಹಂಗಳ ಗ್ರಾಮದ ಆನಂದ್ ಮತ್ತು ಶೋಭ ದಂಪತಿಯ ಆರು ತಿಂಗಳ ಮಗು ಮೃತ ದುರ್ದೈವಿ. ಮಗುವಿಗೆ ಆರು ತಿಂಗಳಾದ ಕಾರಣ ಕಿವಿ ಚುಚ್ಚಿಸಲು ಶೋಭ ತಮ್ಮ ತಾಯಿ ಜೊತೆ ಬೊಮ್ಮಲಾಪುರ ಸರ್ಕಾರಿ ಅಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ವೈದ್ಯ ನಾಗರಾಜು ಮಗುವಿನ ಎರಡು ಕಿವಿಗೆ ಅನಸ್ತೇಷಿಯಾ ಚುಚ್ಚುಮದ್ದು ನೀಡಿದ್ದರು ಎನ್ನಲಾಗಿದೆ. ಈ ವೇಳೆ ಮಗು ವಾಂತಿ ಮಾಡಿಕೊಂಡು ತಕ್ಷಣ ಸಾವನ್ನಪ್ಪಿತು ಎಂದು ಮಗುವಿನ ತಾಯಿ ಶೋಭ ಆರೋಪಿಸಿದ್ದಾರೆ.
ಮಗು ಮೃತಪಟ್ಟ ವಿಚಾರ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ವೈದ್ಯ ನಾಗರಾಜು ಮಗು ಮೃತಪಟ್ಟರೂ ಮಾನವೀಯ ದೃಷ್ಠಿಯಿಂದ ಮಗು ನೋಡಲು ಬರಲಿಲ್ಲ. ಘಟನೆ ನಡೆದು ಆರು ಗಂಟೆ ಕಳೆದರೂ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿನ ಕುಟುಂಬಕ್ಕೆ ವೈದ್ಯಾಧಿಕಾರಿಗಳಿಂದಾಗಲಿ ಅಥವಾ ಅಸ್ಪತ್ರೆಯ ಸಿಬ್ಬಂದಿಗಳಿಂದ ಸಾಂತ್ವಾನದ ಮಾತು ಬರಲಿಲ್ಲ. ನಮಗು ಇದಕ್ಕೂ ಸಂಬಂಧ ಇಲ್ಲದವರಂತೆ ವರ್ತಿಸಿದರು ಎಂದು ಮಗುವಿನ ಪೋಷಕರು ಆರೋಪಿಸಿದರು.
ವೈದ್ಯ ನಾಗರಾಜು ಮಗುವನ್ನು ಕೊಂದಿದ್ದಾರೆ ಇನ್ಯಾರಿಗೂ ಇಂತಹ ನೊವು ಬರಬಾರದು ಕೂಡಲೇ ವೈದ್ಯ ನಾಗರಾಜು ಅವರನ್ನು ಅಮಾನತ್ತು ಮಾಡಿ ಕ್ರಮ ಜರುಗಿಸಬೇಕು ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಘಟನೆ ಮರುಕಳಿಸಬಾರದು ವೈದ್ಯರ ವಿರುದ್ದ ತನಿಖೆ ನಡೆಸಿ ಸುಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ವೈದ್ಯಾಧಿಕಾರಿಗೆ ಸೂಚಿಸಲಾಗುವುದು, ಮಗುವಿನ ಸಾವು ನಿಜಕ್ಕೂ ಬೇಸರ ಸಂಗತಿ. ವೈದ್ಯರು ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ.
ಎಚ್.ಎಂ. ಗಣೇಶ್ ಪ್ರಸಾದ್, ಶಾಸಕರು