Friday, April 18, 2025
Google search engine

Homeರಾಜ್ಯವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ : ವೈದ್ಯರ ಒಳಿತಿಗಾಗಿ ಪಶ್ಚಿಮ ಬಂಗಾಳ ಸರ್ಕಾರದಿಂದ ಹಲವು ಕ್ರಮ

ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ : ವೈದ್ಯರ ಒಳಿತಿಗಾಗಿ ಪಶ್ಚಿಮ ಬಂಗಾಳ ಸರ್ಕಾರದಿಂದ ಹಲವು ಕ್ರಮ

ಕೋಲ್ಕತಾ: ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣ ವಿಚಾರವಾಗಿ ದೇಶದೆಲ್ಲೆಡೆ ಪ್ರತಿಭಟನೆ ಮುಂದುವರೆಯುತ್ತಿದೆ. ಈ ಆಕ್ರೋಶಕ್ಕೆ ಮಣಿದು ಪಶ್ಚಿಮ ಬಂಗಾಳ ಸರ್ಕಾರ ಮಹಿಳಾ ವೈದ್ಯರ ಒಳಿತಿಗಾಗಿ ಹಲವು ಕ್ರಮಗಳನ್ನು ಘೋಷಣೆ ಮಾಡಿದೆ.

ಮಹಿಳಾ ಸಿಬ್ಬಂದಿಗಾಗಿ ಪ್ರತ್ಯೇಕ ಶೌಚಾಲಯ ಸೇರಿದಂತೆ , ರಾತ್ರಿ ವೇಳೆ ಮಹಿಳೆಯರ ಕಾವಲಿಗಾಗಿ ಮಹಿಳಾ ಸಾಥಿ, ಸಂಪೂರ್ಣ ಸಿಸಿಟೀವಿ ಅಳವಡಿಸಿರುವ ಭದ್ರತಾ ಕೋಣೆ, ಸ್ಥಳೀಯ ಪೊಲೀಸ್ ಠಾಣೆಗೆ ಸಂಪರ್ಕ ಹೊಂದಿರುವ ಮೊಬೈಲ್ ಆಪ್ ಸಿದ್ಧಪಡಿಸುವಿಕೆ.

ಅದನ್ನು ಎಲ್ಲಾ ಮಹಿಳಾ ಸಿಬ್ಬಂದಿ ಕಡ್ಡಾಯ ಅಳವಡಿಸಿಕೊಳ್ಳಬೇಕು, ಭದ್ರತಾ ಹಾಗೂ ಉಸಿರಾಟದ ಪರೀಕ್ಷೆ, ಎಲ್ಲಾ ಸಂಸ್ಥೆಗಳಲ್ಲಿಯೂ ಲೈಂಗಿಕ ಕಿರುಕುಳ ಪತ್ತೆಗೆ ವಿಶಾಖಾ ಸಮಿತಿ ರಚಿಸಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಸಾಧ್ಯವಾದಲ್ಲೆಲ್ಲಾ ಮಹಿಳೆಯರನ್ನು ರಾತ್ರಿ ಕರ್ತವ್ಯದಿಂದ ಮುಕ್ತಗೊಳಿಸಬೇಕು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಮುಖ್ಯ ಸಲಹೆಗಾರ ಅಲಾಪನ್ ಬಂಡೋಪಾಧ್ಯಾಯ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular