Thursday, April 3, 2025
Google search engine

Homeರಾಜ್ಯಸುದ್ದಿಜಾಲರೇಣುಕಾ ಪ್ರಸಾದ್ ಕೆ ಎಸ್ ರವರಿಗೆ ಡಾಕ್ಟರೇಟ್ ಪದವಿ

ರೇಣುಕಾ ಪ್ರಸಾದ್ ಕೆ ಎಸ್ ರವರಿಗೆ ಡಾಕ್ಟರೇಟ್ ಪದವಿ

ಹುಣಸೂರು: ರೇಣುಕಾ ಪ್ರಸಾದ್ ಕೆ ಎಸ್ ರವರು ಡಾ| ರಹಮತ್ ತರೀಕೆರೆ ರವರ ಮಾರ್ಗದರ್ಶನದಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ “ಎಂ.ಎಂ. ಕಲಬುರ್ಗಿ ಯವರ ಸಂಶೋಧನೆಗಳಲ್ಲಿ ಕರ್ನಾಟಕತ್ವದ ಸ್ವರೂಪ” ಎಂಬ ಮಹಾ ಪ್ರಬಂಧವನ್ನು ಸಲ್ಲಿಸಿದ್ದು,  ಸದರಿ ಪ್ರಬಂಧವನ್ನು  ಕನ್ನಡ ವಿಶ್ವವಿದ್ಯಾಲಯ ಅಂಗೀಕರಿಸಿ ಡಾಕ್ಟರೇಟ್ ಪದವಿಯನ್ನು ಘೋಷಿಸಿದೆ.

ರೇಣುಕಾ ಪ್ರಸಾದ್ ರವರು ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಛಂದೋ ಸಂಗಾತಿ, ಶಬ್ದಮಣಿ ದರ್ಪಣ ಒಂದು ಅವಲೋಕನ, ಮುಂಜಾವು(ಸಂ) ಕೃತಿಗಳನ್ನು ಪ್ರಕಟಿಸಿರುತ್ತಾರೆ.

ಹುಣಸೂರು ಸಾಂಸ್ಕೃತಿಕ ಅಧ್ಯಯನದ ಐತಿಹಾಸಿಕ ಚಹರೆಗಳು ಎಂಬ ಸಂಶೋಧನೆಯನ್ನು  ಕೈಗೊಂಡಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎಂಟು ವರ್ಷಗಳ ಕಾಲ ಖಜಾಂಚಿಯಾಗಿದ್ದರು. ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾ ಇರುತ್ತಾರೆ. ಇವರು ಮೂಲಕ 14 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ಶಿಕ್ಷಣ ಸಂಬಂಧ ಅನೇಕ ಲೇಖನಗಳನ್ನು ಬರೆದಿದ್ದು ವಿವಿಧ ಪತ್ರಿಕೆಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ.

RELATED ARTICLES
- Advertisment -
Google search engine

Most Popular