ಕೆ.ಆರ್.ನಗರ: ಸಾಲಿಗ್ರಾಮತಾಲ್ಲೋಕು, ದಿಡ್ಡಹಳ್ಳಿಯಲ್ಲಿ ವಿಜೃಂಭಣೆಯಿಂದ ನಡೆದದೊಡ್ಡಮ್ಮತಾಯಿರಥೋತ್ಸವಕ್ಕೆ ಶಾಸಕ ಡಿ.ರವಿಶಂಕರ್ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ದಿಡ್ಡಹಳ್ಳಿಯಲ್ಲಿ ೭ವರ್ಷದ ನಂತರ ನಡೆದದೊಡ್ಡಮ್ಮತಾಯಿರಥೋತ್ಸವದಲ್ಲಿ ಭಾಗವಹಿಸಿದ ಶಾಸಕರನ್ನು ಸ್ವಾಗತಿಸಿದ ಗ್ರಾಮಸ್ಥರು ಮಾತನಾಡಿ ಕೆ.ಆರ್.ನಗರ ವಿಧಾನ ಸಭಾಕ್ಷೇತ್ರದಲ್ಲಿ ೧೫ ವರ್ಷ ಶಾಸಕರಾಗಿ ಮಂತ್ರಿಯಾಗಿದ್ದ ಸಾ.ರಾ. ಮಹೇಶ್‌ರವರುಒಂದೇಒಂದು ಲಕ್ಷ ರೂ.ಗಳ ಶಾಸಕರಅನುದಾನದಲ್ಲಿ ಕೆಲಸ ಮಾಡಿಲ್ಲ. ಆದರೂ ಸಹ ನಮ್ಮೂರಿನಿಂದ ಸುಮಾರು ೧೪೦ ಮತಗಳನ್ನು ಅವರಿಗೆ ಹಾಕುತ್ತಾರೆ. ನಿಮಗೂ ಸಹ ಹೆಚ್ಚಿನ ಮತಗಳನ್ನು ನೀಡಿದ್ದೇವೆ. ನಮ್ಮಊರಿನ ಮುಖ್ಯರಸ್ತೆಯನ್ನುಡಾಂಬರೀಕರಣ ಮಾಡಿಕೊಡಿಎಂದು ಮನವಿ ಮಾಡಿದರು.ಅದಕ್ಕೆ ಉತ್ತರಿಸಿದ ಶಾಸಕರು ನಿಮ್ಮಊರಿನ ೨ರಸ್ತೆಗಳನ್ನು ಸೇರಿಸಿದ್ದೇನೆ.
ಅನುದಾನ ಬಂದಕೂಡಲೆ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದಅವರುಕಾಂಗ್ರೆಸ್ ಸರ್ಕಾರಅಧಿಕಾರಕ್ಕೆ ಬಂದ ಮೇಲೆ ೫ ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಜಾರಿಗೊಳಿಸಿರುವುದರಿಂದ ಬಡವರು ನೆಮ್ಮದಿಯಾಗಿದ್ದಾರೆ. ದೊಡ್ಡಮ್ಮತಾಯಿಯ ಆಶೀರ್ವಾದದಿಂದ ಮಳೆ ಬೆಳೆ ಚೆನ್ನಾಗಿಆಗುತ್ತಿದ್ದು ನದಿಗಳು ಅಣೆಕಟ್ಟುಗಳು, ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ ಎಂದರು.
ದೊಡ್ಡಮ್ಮತಾಯಿರಥೋತ್ಸವದಲ್ಲಿ ಭಕ್ತರು ಸುಮಾರು ೨ ಕಿ.ಮೀ ರಥವನ್ನು ಎಳೆದು ಹರಕೆಗಳನ್ನು ತೀರಿಸಿಕೊಂಡವನ್ನು ಹಾಯ್ದರು.ರಥೋತ್ಸವದಲ್ಲಿ ಬಂಧುಗಳು ನೆಂಟರು ಸ್ನೇಹಿತರು ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿಮುಖಂಡರಾದ ದಿಡ್ಡಹಳ್ಳಿ ಬಸವರಾಜು, ಫಾಲಾಕ್ಷ, ಡಿ.ಜೆ. ಮಹೇಶ್, ಸಾಮ್ರಾಟ್, ನಿಂಗರಾಜು, ಸ್ವಾಮಿ, ಗೋವಿಂದೇಗೌಡ, ಅಣ್ಣಯ್ಯಶೆಟ್ಟಿ, ಸಣ್ಣಸ್ವಾಮಿಗೌಡ, ಬಿ.ಜೆ. ಜವರಾಯಿಗೌಡ, ಚಂದ್ರಕಾಂತ, ಕೃಷ್ಣೇಗೌಡ ಹಾಗೂ ಗ್ರಾಮಸ್ಥರು ಹಾಜರಿದ್ದರು.