ಗುಂಡ್ಲುಪೇಟೆ: ತಾಲೂಕಿನ ಹಂಗಳ ಗ್ರಾಮದಲ್ಲಿ ಆಷಾಢ ಮಾಸದ 4ನೇ ಶುಕ್ರವಾರದ ಹಿನ್ನೆಲೆ ದೊಡ್ಡಮ್ಮತಾಯಿ ಉತ್ಸವ ಮೂರ್ತಿ ಹಾಗೂ ಸಿದ್ದಪ್ಪಾಜಿ ಕಂಡಾಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಗ್ರಾಮದ ಕೆರೆಯಂಗಳದಲ್ಲಿ ಕಂಡಾಯಗಳನ್ನು ಶುಚಿಗೊಳಿಸಿ, ವಿಭೂತಿ ಹಚ್ಚಿ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಯಿತು. ನಂತರ ಮಂಗಳ ವಾದ್ಯ ಛತ್ರಿ ಚಾಮರಗಳೊಂದಿಗೆ ಮಕ್ಕಳು ಕಳಸ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ತದ ನಂತರ ದೇವರ ಮೂರ್ತಿಯನ್ನು ದೊಡ್ಡತಾಯಿ ದೇವರು ಹಾಗೂ ಕಂಡಾಯಗಳನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ದೇವರ ಗುಡ್ಡರ ನೆರವೇರಿಸಿದರು.
ಈ ವೇಳೆ ಮಹಿಳೆಯರು ಕುಟುಂಬ ಸಮೇತರಾಗಿ ದೊಡ್ಡತಾಯಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನರಾದ ಗೋವಿಂದನಾಯಕ, ಮಾದನಾಯಕ, ಕರಿಬಸವನಾಯಕ, ಸಿದ್ದನಾಯಕ, ಮುದ್ದನಾಯಕ, ಸಿದ್ದರಾಜನಾಯಕ, ಕಟ್ಟನಾಯಕ, ದೊಡ್ಡನಾಯಕ, ವೃಷಬೇಂದ್ರ, ರಂಗಸ್ವಾಮಿ, ಸುನಿಲ್, ಸಿದ್ದು, ಮಂಜುನಾಥ್, ಸಿದ್ದರಾಜನಾಯಕ, ಸ್ವಾಮಿ, ಮುತ್ತುರಾಜು, ಮನು, ಗೋಪಾಲ್, ನಾಗರಾಜು, ನಿಂಗರಾಜು, ಬಸವಣ್ಣ, ಸುಬ್ಬನಾಯಕ, ಮೂರ್ತಿ, ಪ್ರತಾಪ್, ಶಿವನಾಯಕ ಸೇರಿದಂತೆ ಇತರರು ಹಾಜರಿದ್ದರು.