ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕೃಷಿ ಪತಿನ ಸಹಕಾರ ಸಂಘಗಳು ರೈತ ಸದಸ್ಯರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ನೀಡಬೇಕು ಎಂದು ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು. ತಾಲೂಕಿನ ಚಿಕ್ಕವಡ್ಡರಗುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು ರೈತರಿಗೆ ಸಾಲ ನೀಡುವುದರ ಜತೆಗೆ ಸ್ತಿಶಕ್ತಿ ಮಹಿಳಾ ಸ್ವ-ಸಹಾಯ ಸಂಘಗಳಿಗೂ ಸಾಲ ಸೌಲಭ್ಯ ನೀಡುವ ಮೂಲಕ ಅವರ ಆರ್ಥಿಕಾಭಿವೃದ್ಧಿಗೆ ಸಹಕರಿಸಬೇಕೆಂದರು.

ಸoಘದ ವತಿಯಿಂದ ರೈತರಿಗೆ ಬೇಕಾಗುವಂತಹ ಗೊಬ್ಬರ ಮತ್ತಿತರ ಪರಿಕರಗಳನ್ನು ಮಾರಾಟ ಮಾಡಬೇಕು. ಇದರಿಂದ ಸಂಘಕ್ಕೆ ಆರ್ಥಿಕ ಲಾಭವಾಗಲಿದೆ. ಇಂತಹ ವಿಚಾರವನ್ನು ಆಡಳಿತ ಮಮಡಳಿಯವರು ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷೆ ಪದ್ಮಮ್ಮ ಮಾತನಾಡಿ ೧೧.೭೧ ಕೋಟಿ ರೂಗಳನ್ನು ರೈತ ಸದಸ್ಯರಿಗೆ ವಿತರಿಸಲಾಗಿದ್ದು, ಈ ಬಾರಿ ಹೊಸ ಸದಸ್ಯರಿಗೂ ಸಾಲ ವಿತರಿಸಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದ ಅಧ್ಯಕ್ಷರು ಸಂಘ ೮.೬೮ ಲಕ್ಷ ನಿವ್ವಳ ಲಾಭ ಗಳಿಸಿದ್ದು, ಇದರ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಸಕ್ತ ಸಾಲಿನಲ್ಲಿ ೧೦ ಮಹಿಳಾ ಸಂಘಗಳಿಗೆ ೭೬ ಲಕ್ಷ ಸಾಲ ವಿತರಿಸಲಾಗಿದ್ದು, ಸಂಘದ ವತಿಯಿಂದ ಪಡಿತರ ವಿತರಣೆ ಮಾಡುತ್ತಿದ್ದು, ಪಡಿತರ ಚೀಟಿದಾರರಿಂದ ಯಾವುದೇ ದೂರುಗಳು ಬಾರದಂತೆ ಸಕಾಲದಲ್ಲಿ ವಿತರಣೆ ಮಾಡುವುದರ ಜತೆಗೆ ಗಂಧನಹಳ್ಳಿಕೊಪ್ಪಲು ಗ್ರಾಮದಲ್ಲಿ ಉಪಕೇಂದ್ರ ಆರಂಭಿಸಿ ಅಲ್ಲಿನ ಪಪಡಿತರದಾರರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘಕ್ಕೆ ಕಂಚಿನಕೆರೆ, ಗಂಧನಹಳ್ಳಿ, ಬೊಮ್ಮೇನಹಳ್ಳಿ, ಕಾಕನಹಳ್ಳಿ, ಗಂಧನಹಳ್ಳಿಕೊಪ್ಪಲು ಮತ್ತು ಚಿಕ್ಕವಡ್ಡರಗುಡಿ ಗ್ರಾಮಗಳು ಸೇರಿದ್ದು, ೧೭೪೬ ಮಂದಿ ಷೇರುದಾರ ಸದಸ್ಯರನ್ನು ಹೊಂದಿದೆ. ಹೊಸದಾಗಿ ಮತ್ತಷ್ಟು ಮಂದಿ ಸದಸ್ಯರನ್ನಾಗಿ ಮಾಡಲು ಆಡಳಿತ ಮಂಡಳಿಯ ವತಿಯಿಂದ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷೆ ಪುಷ್ಪಲತರಮೇಶ್, ರೈತ ಮುಖಂಡರಾದ ಕೆ.ಹೆಚ್.ಬುಡೀಗೌಡ, ನಾಗರಾಜು, ಕಿಟ್ಟಿಪ್ರಸಾದ್, ಸಿ.ವಿ.ಗುಡಿಜಗದೀಶ್, ದೇವರಾಜು ಮಾತನಾಡಿದರು. ಸಂಘದ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಎಸ್.ಭಾಸ್ಕರ್ ವಾರ್ಷಿಕ ವರದಿಯನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ೨೦೨೫-೨೬ನೇ ಸಾಲಿನ ಆಯ-ವ್ಯಯವನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು.
ಉಪಾಧ್ಯಕ್ಷ ಮಹದೇವನಾಯಕ, ನಿರ್ದೇಶಕರಾದ ರಂಗೇಗೌಡ, ಜಿ.ಆರ್.ಕೃಷ್ಣೇಗೌಡ, ನಾಗಮ್ಮ, ಕಾಮಾಕ್ಷಮ್ಮ, ನಾರಾಯಣ್, ಕೆಂಪೇಗೌಡ, ಮಹದೇವ್, ನಿಂಗಾಜೋಗಿ, ರಮೇಶ್‌ಬಾಬು, ವೀರಭದ್ರಸ್ವಾಮಿ, ಸಂಘದ ಸಿಬ್ಬಂದಿಗಳಾದ ಜಯರಾಮು, ವಿ.ಕೆ.ನಂದೀಶ್, ಈಶ್ವರ್ ಹಾಜರಿದ್ದರು.