Saturday, April 19, 2025
Google search engine

Homeರಾಜ್ಯಸುದ್ದಿಜಾಲನಾಡಹಬ್ಬ ದಸರಾ ಅಂಗವಾಗಿ ಗೊಂಬೆ ಕೂರಿಸುವ ಸ್ಪರ್ಧೆ

ನಾಡಹಬ್ಬ ದಸರಾ ಅಂಗವಾಗಿ ಗೊಂಬೆ ಕೂರಿಸುವ ಸ್ಪರ್ಧೆ

ಚಾಮರಾಜನಗರ: ಜೈ ಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂತ್ ಕ್ಲಬ್ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಗೊಂಬೆ ಕೂರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮನೆ ಮನೆಗಳಲ್ಲಿ ದಸರಾ ಸಂದರ್ಭದಲ್ಲಿ ಗೊಂಬೆ ಕೂರಿಸುವ ಪದ್ಧತಿಯಿದ್ದು ,ಪ್ರೋತ್ಸಾಹಿಸುವ ದೃಷ್ಟಿಯಿಂದ ಗೊಂಬೆ ಕೂರಿಸುವ ಸ್ಪರ್ಧೆ 23 ಹಮ್ಮಿಕೊಳ್ಳಲಾಗಿದ್ದು ಉತ್ತಮ ಐದು ಗೊಂಬೆ ಕೂರಿಸುವ ಮನೆಗಳಿಗೆ ಚಾಮರಾಜನಗರದ ಗೊಂಬೆ ಮನೆ ಯಂದು ಪ್ರಸಿದ್ಧಿಯಾಗಿದ್ದ ಶ್ರೀಮತಿ ಲೀಲಾವತಮ್ಮ ಮತ್ತು ಶ್ರೀ ಟಿ.ಕೆ ನಂಜುಂಡಯ್ಯ ರವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಎಸ್ ಋಗ್ವೇದಿ ತಿಳಿಸಿದ್ದಾರೆ.

ಗೊಂಬೆ ಕೋರಿಸುವ ಮನೆಯವರು ತಮ್ಮ ಮನೆಯ ಗೊಂಬೆ ಫೋಟೋ, ಮತ್ತು ವಿಡಿಯೋವನ್ನು ( ಎರಡು ನಿಮಿಷ) ಕಳುಹಿಸಬೇಕು. ತೀರ್ಪುಗಾರರು ಮನೆಗೆ ಭೇಟಿ ನೀಡಿ ಅಂತಿಮವಾಗಿ ಪ್ರಥಮ ,ದ್ವಿತೀಯ, ತೃತೀಯ ಮತ್ತು 2 ಸಮಾಧಾನಕರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಹೆಚ್ಚಿನ ವಿವರಗಳಿಗೆ 9902317670 ಸಂಪರ್ಕಿಸಲು ಕೋರಲಾಗಿದೆ.

RELATED ARTICLES
- Advertisment -
Google search engine

Most Popular