Monday, December 2, 2024
Google search engine

Homeಸಿನಿಮಾಫೆಬ್ರವರಿ 16ರಂದು ಮೈಸೂರಿನಲ್ಲಿ ನಟ ಡಾಲಿ ಧನಂಜಯ್-ಧನ್ಯತಾ ಮದುವೆ

ಫೆಬ್ರವರಿ 16ರಂದು ಮೈಸೂರಿನಲ್ಲಿ ನಟ ಡಾಲಿ ಧನಂಜಯ್-ಧನ್ಯತಾ ಮದುವೆ

ನಟ ಡಾಲಿ ಧನಂಜಯ್ ಅವರು ಈಗ ವಿವಾಹ ಆಗುತ್ತಿದ್ದಾರೆ. ಬಹುಕಾಲದ ಗೆಳತಿ ಜೊತೆ ಅವರ ವಿವಾಹ ನೆರವೇರುತ್ತಿದೆ. ಈ ಗುಡ್​ನ್ಯೂಸ್​ನ ಅವರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭಾವಿ ಪತ್ನಿ ಜೊತೆ ಫೋಟೋಶೂಟ್ ಕೂಡ ಮಾಡಿಸಿದ್ದಾರೆ.

ಧನಂಜಯ್ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಧನ್ಯತಾ. ಅವರು ವೃತ್ತಿಯಲ್ಲಿ ವೈದ್ಯೆ. ಧನ್ಯತಾ ಹಾಗೂ ಧನಂಜಯ್ ಓದಿದ್ದು ಮೈಸೂರಿನಲ್ಲಿ. ಇಬ್ಬರ ಮಧ್ಯೆ ಹಲವು ವರ್ಷಗಳ ಪರಿಚಯ ಇದೆ. ಇಬ್ಬರೂ ವಿವಾಹ ಆಗುತ್ತಿದ್ದಾರೆ.

ಫೆಬ್ರವರಿ 16ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ಧನಂಜಯ್ ಅವರ ಮದುವೆ ನೆರವೇರಲಿದೆ. ಚಿತ್ರರಂಗದವರು, ರಾಜಕೀಯದವರು ಸೇರಿದಂತೆ ಅನೇಕ ಕ್ಷೇತ್ರಗಳ ಗಣ್ಯರು ಈ ವಿವಾಹ ಕಾರ್ಯದಲ್ಲಿ ಭಾಗಿ ಆಗಲಿದ್ದಾರೆ.

ಧನಂಜಯ್ ಅವರದ್ದು ಪ್ರೇಮ ವಿವಾಹ. ಧನಂಜಯ್ ಹಾಗೂ ಧನ್ಯತಾ ಮಧ್ಯೆ ಪ್ರೀತಿ ಮೂಡಿತ್ತು. ಈಗ ಪ್ರೀತಿಗೆ ಇವರು ಹೊಸ ಅರ್ಥ ನೀಡುತ್ತಾ ಇದ್ದಾರೆ. ಧನ್ಯತಾ ಚಿತ್ರದುರ್ಗ ಮೂಲದವರು. ಅವರು ಅಪ್ಪಟ ಕನ್ನಡತಿ. ಭಾವಿ ಪತ್ನಿ ಜೊತೆಗಿನ ಸುಂದರವಾದ ಫೋಟೋನ ಧನಂಜಯ್ ಅವರು ಹಂಚಿಕೊಂಡಿದ್ದಾರೆ.


RELATED ARTICLES
- Advertisment -
Google search engine

Most Popular