Monday, April 14, 2025
Google search engine

Homeಸ್ಥಳೀಯಫೆ.15, 16ರಂದು ಡಾಲಿ ಧನಂಜಯ ವಿವಾಹ

ಫೆ.15, 16ರಂದು ಡಾಲಿ ಧನಂಜಯ ವಿವಾಹ

ಮೈಸೂರು: ನಟ ಡಾಲಿ ಧನಂಜಯ ಹಾಗೂ ಧನ್ಯತಾ ಅವರ ವಿವಾಹವು ಫೆ. ೧೫ ಹಾಗೂ ೧೬ರಂದು ಇಲ್ಲಿನ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ನಡೆಯಲಿದ್ದು, ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಚಾಮುಂಡೇಶ್ವರಿ ದೇಗುಲದ ಮಾದರಿಯಲ್ಲಿ ಬೃಹತ್ ಮಂಟಪ ನಿರ್ಮಾಣವಾಗುತ್ತಿದೆ.

ಡಾಲಿ ಧನಂಜಯ್ಯ, ಮೈಸೂರಿನೊಡನೆ ನನಗೆ ಭಾವನಾತ್ಮಕ ನಂಟಿದೆ. ಓದಿದ್ದು, ರಂಗಭೂಮಿ, ನಟನೆಯ ನಂಟು ಬೆಳೆದಿದ್ದು ಇಲ್ಲಿಂದಲೇ. ಹೀಗಾಗಿಯೇ ಇಲ್ಲಿಯೇ ಮದುವೆ ಆಗುತ್ತಿದ್ದೇನೆ’ ಎಂದು ಧನಂಜಯ ಮಾಹಿತಿ ನೀಡಿದರು. ಸರಳವಾಗಿ ವಿವಾಹವಾಗುವ ಆಲೋಚನೆ ಇತ್ತು. ರಿಜಿಸ್ಟರ್ ಮ್ಯಾರೇಜ್ ಆಗಿ ನಂತರ ಎಲ್ಲರಿಗೂ ತಿಳಿಸುವ ಆಸೆ ಇತ್ತು. ಆದರೆ ಮನೆಯವರು ನಮ್ಮೂರಿನ ಜನಕ್ಕೆ ಊಟ ಹಾಕಿಸಬೇಕು ಎಂದು ಆಸೆ ಒಟ್ಟರು, ನನಗೂ ಅಭಿಮಾನಿಗಳ ಒಂದೊಳ್ಳೆ ಊಟ ಹಾಕಿಸಬೇಕು ಎಂಬುದು ನಮಸ್ಸಿನಲ್ಲಿತ್ತು. ಇನ್ನು ಗೆಳೆಯರು, ಸಿನಿಮಾರಂಗದವರು ಪಾರ್ಟಿ ಕೇಳೇ ಕೇಳ್ತಾರೆ, ಎಲ್ಲರಿಗೂ ಪ್ರತ್ಯೇಕವಾಗಿ ನೋಡಿಕೊಳ್ಳುವುದು ಸ್ವಲ್ಪ ಕಷ್ಟವಾಗಿತ್ತು ಹಾಗಾಗಿ ಎಲ್ಲರ ಒತ್ತಾಸೆಯಿಂದ ಬೃಹತ್ ಕಾರ್ಯಕ್ರಮವಾಗಿ ಮಾರ್ಪಾಡಾಗಿದೆ’ ಎಂದರು.

ಭಿಮಾನಿಗಳಿಗೆಂದೇ ವಿದ್ಯಾಪತಿ’ ದ್ವಾರವನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದೇವೆ. ಜನಸಾಮಾನ್ಯರು, ವಿಐಪಿಗಳಿಗೂ ಒಂದೇ ಮಾದರಿಯ ಊಟದ ವ್ಯವಸ್ಥೆ ಇರಲಿದೆ. ಕನ್ನಡ ಚಿತ್ರರಂಗದ ಜೊತೆಗೆ ಹೊರ ರಾಜ್ಯ, ವಿದೇಶಗಳಿಂದಲೂ ಸ್ನೇಹಿತರು ಬರಲಿದ್ದಾರೆ. ೨೫-೩೫ ಸಾವಿರದಷ್ಟು ಜನ ಸೇರುವ ನಿರೀಕ್ಷೆ ಇದೆ’ ಎಂದು ತಿಳಿಸಿದರು. ಫೆ. ೧೫ರ ಸಂಜೆ ಆರತಕ್ಷತೆ ಹಾಗೂ ೧೬ರಂದು ಬೆಳಿಗ್ಗೆ ಮದುವೆ ಕಾರ್ಯಕ್ರಮ ನಡೆಯಲಿದೆ ಎಂದು ಡಾಲಿ ಧನಂಜಯ್ಯ ವಿವರಿಸಿದರು.

RELATED ARTICLES
- Advertisment -
Google search engine

Most Popular