ಹುಣಸೂರು: ವರುಷಕ್ಕೆ ಎರಡು ಬಾರಿ ರಕ್ತದಾನ ಮಾಡುವುದರಿಂದ ಮನುಷ್ಯನ ಆರೋಗ್ಯವೃದ್ದಿಯಾಗಲಿದೆ. ಜತೆಗೆ ದಿನನಿತ್ಯ ಲವಲವಿಕೆಯಿಂದ ಇರಲು ಸಾಧ್ಯವಿದೆ. ಆದ್ದರಿಂದ ಯಾರೂ ಕೂಡ ಆತಂಕ ಪಡಬೇಡಿ ಎಂದು ರೋಟರಿ ಅಧ್ಯಕ್ಷ ಡಾ.ಪ್ರಸನ್ನ ಕೆ.ಪಿ ತಿಳಿಸಿದರು.
ನಗರದ ರೋಟರಿ ಭವನದಲ್ಲಿ ರಕ್ತದಾನವನ್ನು. ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸರಗೂರು, ಆಶ್ರಯ ಹಸ್ತ ಟ್ರಸ್ಟ್ ಬೆಂಗಳೂರು, ರಕ್ತ ನಿಧಿ ಕೇಂದ್ರ ಕೆ.ಆರ್ ಆಸ್ಪತ್ರೆ ಮೈಸೂರು, ರೋಟರಿ ಕ್ಲಬ್ ಹುಣಸೂರು, ಇನ್ನರ್ ವೀಲ್ ಹುಣಸೂರು, ಜ್ಞಾನ ಚಿಗುರು ಸಂಸ್ಥೆ ಹಾಗೂ ಇನ್ನಿತರೆ ಸೇವಾ ಸಂಸ್ಥೆಗಳು ಸೇರಿದಂತೆ ಸಹಕಾರದೊಂದಿಗೆ 31 ಶಿಬಿರಾರ್ಥಿಗಳು ರಕ್ತದಾನ ಮಾಡಿದ್ದಾರೆ ಎಂದರು.
ಹುಣಸೂರು ರೋಟರಿ ಕ್ಲಬ್ ಕಾರ್ಯದರ್ಶಿ ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಕೃಷ್ಣಕುಮಾರ್, ಮಾತನಾಡಿ, ಶಿಬಿರಾರ್ಥಿಗಳು ಉಚಿತವಾಗಿ ನೀಡುವ ರಕ್ತದಾನ ಹಲವು ನಿರ್ಗತಿಕರ ಬದುಕಿಗೆ ಆಸರೆಯಾಗಲಿದೆ. ಇಂತಹ ಸೇವೆಯಲ್ಲಿ ತೊಡಗಿರುವ ಸ್ವಾಮಿ ವಿವೇಕಾನಂದ ಯೂತ್ ನ ಸೇವೆ ಶ್ಲಾಘನೀಯವೆಂದರು.
ಸಹಾಯಕ ಗವರ್ನರ್ ಅರ್.ಆನಂದ್, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಮುದಾಯ ಆಧಾರಿತ ಕಾರ್ಯಕ್ರಮಗಳ ಯೋಜನೆ ನಿರ್ದೇಶಕ ಡಾಕ್ಟರ್ ಅಭಿಷೇಕ್ ಆರ್, ಇನ್ನರ್ ವಿಲ್ ಸಂಸ್ಥೆಯ ಸ್ಮಿತಾ ದಯಾನಂದ್, ಕೆ.ಆರ್ ಆಸ್ಪತ್ರೆ ರಕ್ತ ನಿಧಿ ಕೇಂದ್ರದ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ರಘು, ವಿವೇಕಾನಂದ ಯೂತನ್ ಶಿವಲಿಂಗ, ಹ್ಯಾಂಡ್ ಪೋಸ್ಟ್ ರಾಜೇಶ್, ಚಿಗರು ಸಂಪನ್ಮೂಲ ಶಂಕರ್, ಆರೋಗ್ಯ ಇಲಾಖೆಯ ರಾಜೇಶ್ವರಿ ಇದ್ದರು.