ಹುಣಸೂರು: ಹನುಮ ಜಯಂತಿ ಅಂಗವಾಗಿ ಕಳೆದ ಹತ್ತು ವರ್ಷಗಳಿಂದ ನಗರದಲ್ಲಿ ಮೆರೆವಣಿಗೆ ಬರುವ ಹನುಮ ಭಕ್ತರಿಗೆ ಅನ್ನದಾನ ಮಾಡುವುದು ತೃಪ್ತಿ ತಂದಿದೆ ಎಂದು ಅನುಷಾ ಸ್ಟುಡಿಯೋ ಮಾಲಿಕ ರಾಮಸ್ವಾಮಿ ತಿಳಿಸಿದರು.
ಪ್ರತಿವರ್ಷದಂತೆ ಈ ಭಾರಿಯೂ ಹನುಮ ಜಯಂತಿಗೆ ಗೋಕುಲ ರಸ್ತೆಯ ಎಲ್ಲಾ ಅಂಗಡಿ ಮಾಲಿಕರು ಅಕ್ಕ- ಪಕ್ಕದ ಸ್ನೇಹಿತರು ಸೇರಿ ಮಜ್ಜಿಗೆ, ಪಾನಕ , ಮೊಸರನ್ನ , ತರಕಾರಿ ಬಾತನ್ನು ಸಾವಿರಾರು ಹನುಮ ಭಕ್ತರಿಗೆ ಪೂಜೆ ಸಲ್ಲಿಸಿದ ನಂತರ ಪ್ರಸಾದ ರೂಪದಲ್ಲಿ ನೀಡಲಾಯಿತು.

ಹುಣಸೂರು ಜನತೆ ಸೌಹಾರ್ದತೆಗೆ ಹೆಸರಾಗಿದ್ದು, ಸರ್ವಧರ್ಮಗಳು ಅನ್ಯೋನ್ಯತೆಗೆ ಸಹಕಾರಿಯಾಗಿವೆ . ಇಡೀ ಗೋಕುಲ ರಸ್ತೆ ಮತ್ತು ಹಳೇ ಬಸ್ಸ್ಯಾಂಡ್ ಸೇರಿದಂತೆ ಕೇಸರಿ ಧ್ವಜ, ಹನುಮ ಭಾವಚಿತ್ರಗಳು ಹಾಗೆ ಎಲ್.ಇ.ಡಿ., ಸೀರೆಲ್ ಸೆಟ್ ಹಾಕಿ ವರ್ಣರಂಜಿತವಾಗಿ ಬೆಳಕು ಹರಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಗೋವಿಂದೇಗೌಡ, ಗಿರೀಶ್, ಯೋಗಿಶ, ರವಿ, ಮೋನಿಕ ಮಂಜು, ತೋಂಟಪ್ಪ, ಉಮೇಶ್, ದಿನೇಶ್, ಹಾಗೂ ಗೋಕುಲ ರಸ್ತೆಯ ನಿವಾಸಿಗಳು ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು ಎಂದು ತಿಳಿಸಿದರು.
ಗೋಕುಲ ರಸ್ತೆಯ ಮುಂಭಾಗ ಪ್ರಥಮ ಬಾರಿಗೆ ಹನುಮ ವಿಗ್ರಹ ಸ್ಥಾಪಿಸಿದ್ದು, ಬಂದ ಸಾವಿರಾರು ಭಕ್ತಾಧಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ವಿಶೇಷವಾಗಿತ್ತು.