ಹನಗೋಡು: ಹೋಬಳಿಯ ಯಶೋಧರಪುರ ಗ್ರಾಮದಲ್ಲಿ ಹಮ್ಮಿ ಕೊಂಡಿರುವ ಎನ್ನೆಸ್ಸೆಸ್ ವಾರ್ಷಿಕ ವಿಶೇಷೆ ಶಿಬಿರದ ಶಿಬಿರಾರ್ಥಿಗಳು ಗ್ರಾಮದಲ್ಲಿ ಶ್ರಮದಾನ ಹಾಗೂ ಸ್ವಚ್ಛತಾ ಕಾರ್ಯ ಮಾಡಿದರು.
ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯ ಯಶೋಧರಪುರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ, ವಿದ್ಯಾವರ್ಧಕ ಕಾನೂನು ಕಾಲೇಜು, ಮೈಸೂರು, ವಿದ್ಯಾವಿಕಾಸ ಕಾನೂನು ಕಾಲೇಜು, ಮೈಸೂರು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು, ಎಚ್. ಸಿ.ದಾಸಪ್ಪ ವಿಚಾರ ಸಂಸ್ಥೆ, ಮೈಸೂರು, ಹಾಗೂ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಮೈಸೂರು ಇವರುಗಳ ಆಶ್ರಯದಲ್ಲಿ ನಡೆಯುತ್ತಿರುವ ಎನ್‌ಎಸ್‌ಎಸ್ ಶಿಬಿರಾರ್ಥಿಗಳ ೪ನೇ ದಿನದ ಶ್ರಮದಾನ ಅಂಗವಾಗಿ ಯಶೋಧರಪುರದ ಬಸ್ ತಂಗುದಾಣ, ಗ್ರಾಮದ ನ್ಯಾಯಬೆಲೆ ಆಂಗಡಿಯನ್ನು ಸ್ವಚ್ಛತೆ ಮಾಡಿ ಸುಣ್ಣ, ಬಣ್ಣ ಬಳಿದರು. ಇದಲ್ಲದೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಪೇಂಟಿಂಗ್ ಮಾಡಿ ಗೋಡೆ ಹಾಗೂ ಮುಂಬಾಗದ ಕಂಬಗಳಿಗೆ ಚಿತ್ರ ಬಿಡಿಸಿ ಅಣಿಗೊಳಿಸಿದರು. ನಂತರ ರಾಜ್ಯ ಹೆದ್ದಾರಿ ಬೆಂಗಳೂರು ಮಂಗಳೂರು ರಸ್ತೆ ಬದಿಯ ಗಿಡಗಂಟಿಗಳು ಹಾಗೂ ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.
ಗಿಡ ನೆಟ್ಟು ಪರಿಸರ ದಿನಾಚರಣೆ ಆಚರಿಸಿದರು: ಗ್ರಾಮದ ಸಮೀಪವಿರುವ ಕಲ್ ಬೆಟ್ಟದ ಸಾಲು ಮರದ ತಿಮ್ಮಕ್ಕ ವೃಕ್ಷ ದ್ಯಾನವನದಲ್ಲಿ ಶಿಬಿರಾರ್ಥಿಗಳು ಸ್ವಚ್ಛತೆ ಮಾಡಿದರು. ನಂತರ ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ನೂರಾರು ಗಿಡಗಳನ್ನು ನೆಡು ಮೂಲಕ ವನಮಹೋತ್ಸವ ಕಾರ್ಯಕ್ರಮ ಆಚರಿಸಿದರು.
ಕಾರ್ಯಕ್ರಮದಲ್ಲಿ ವಲಯ ಅರಣ್ಯ ಅಧಿಕಾರಿ ನಂದಕುಮಾರ್, ಶಿಬಿರದ ಮಾರ್ಗದರ್ಶಕ ಪ್ರೊ.ಜಿ.ಬಿ. ಶಿವರಾಜು, ಶಿಬಿರಾಧಿಕಾರಿಗಳಾದ ಡಾ.ಕುಮಾರ್, ಡಾ.ರಾಘವೇಂದ್ರ. ವೈ.ಎಸ್. ಕಿರಣ್, ಕುಮಾರ್ ಸೇರಿದಂತೆ ಶಿಭಿರದ ೧೩೦ ಶಿಬಿರಾರ್ಥಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.