ರೋಟರಿ ಸದಸ್ಯರಾದ ಉದ್ಯಮಿ ಹರೀಶ್ ಅವರ ಹುಟ್ಟುಹಬ್ಬ ಪ್ರಯುಕ್ತ ಕಂಪ್ಯೂಟರ್ ವಿತರಣೆ
ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಕಗ್ಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆ ವತಿಯಿಂದ 50 ಸಾವಿರ ಮೌಲ್ಯದ ಕಂಪ್ಯೂಟರ್ ಗಳನ್ನು ವಿತರಿಸಲಾಯಿತು.

ಕಗ್ಗುಂಡಿ ಗ್ರಾಮದವರಾದ ಉದ್ಯಮಿ ಹರೀಶ್ ಅವರ ಪ್ರಾಯೋಜಕತ್ವದಲ್ಲಿ ಕಂಪ್ಯೂಟರ್ ಗಳನ್ನು ವಿತರಿಸಿದ ರೋಟರಿ ಐಕಾನ್ಸ್ ಕ್ಲಬ್ ಅಧ್ಯಕ್ಷರಾದ ಜೆ.ಎಸ್ ನಾಗರಾಜ್ ಅವರು ಮಾತನಾಡಿ ಸಾಮಾಜಿಕ ಸೇವೆ ರೋಟರಿ ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು ನಮ್ಮ ಸಂಸ್ಥೆ ಸದಸ್ಯರಾದ ಹರೀಶ್ ಅವರು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಈ ಕೊಡುಗೆ ನೀಡಲು ಬಯಸಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಸಂದರ್ಭ ಹುಟ್ಟೂರಿನ ಸರ್ಕಾರಿ ಶಾಲೆಗೆ ಕೈಲಾದ ಸಹಾಯ ಮಾಡುವ ಉದ್ದೇಶದಿಂದ ಕಂಪ್ಯೂಟರ್ ವಿತರಿಸಿದ್ದಾರೆ, ರೋಟರಿ ಸಂಸ್ಥೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ಅಂಗನವಾಡಿಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದನ್ನು ಪ್ರಮುಖ ಗುರಿಯಾಗಿಸಿ ಈಗಾಗಲೇ ವಿವಿಧ ದಾನಿಗಳ ನೆರವಿನಿಂದ ತಾಲೂಕಿನ ವಿವಿಧ ಶಾಲೆಗಳಿಗೆ ನೆರವು ನೀಡಲಾಗಿದೆ ಎಂದರು.
ಉದ್ಯಮಿ ಹರೀಶ್ ಅವರು ಮಾತನಾಡಿ ಕಾಲಕಾಲಕ್ಕೆ ತಕ್ಕಂತೆ ಶಿಕ್ಷಣದ ವ್ಯವಸ್ಥೆ ಬದಲಾಗುತ್ತಿದ್ದು ಆಧುನಿಕ ತಂತ್ರಜ್ಞಾನ ಯುಗದಲ್ಲಿರುವ ವಿದ್ಯಾರ್ಥಿಗಳು ಬಾಲ್ಯದಲ್ಲಿ ಕಂಪ್ಯೂಟರ್ ಜ್ಞಾನ ಬೆಳೆಸಿಕೊಳ್ಳುವ ಮೂಲಕ ಉನ್ನತ ಅಧ್ಯಯನ ಮಾಡುವಾಗ ತಮ್ಮ ಜ್ಞಾನ ವೃದ್ಧಿಸಿಕೊಳ್ಳಲು ಸಹಕಾರಿಯಾಗಬೇಕು ಎಂಬ ಉದ್ದೇಶದಿಂದ ನಾನು ಓದಿದ ಶಾಲೆಗೆ ನೆರವು ನೀಡುತ್ತಿದ್ದೇನೆ ಎಂದರು.
ರೋಟರಿ ಸಂಸ್ಥೆ ನಿಕಟಪೂರ್ವ ಅಧ್ಯಕ್ಷರಾದ ಕೆ.ರಮೇಶ್ ಹಾಗೂ ನಿಯೋಜಿತ ಅಧ್ಯಕ್ಷರಾದ ಸಂಪತ್ ಅವರು ಮಾತನಾಡಿ ವಿದ್ಯಾರ್ಥಿ ಜೀವನದಿಂದ ಸ್ವಾಮಿ ವಿವೇಕಾನಂದರು ಸೇರಿದಂತೆ ಮಹಾನ್ ನಾಯಕರ ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದರು.
ಈ ಸಂದರ್ಭ ರೋಟರಿ ಐಕಾನ್ಸ್ ಕಾರ್ಯದರ್ಶಿ ಪ್ರಸನ್ನ ಕುಮಾರ್, ಖಜಾಂಚಿ ಬಿ.ಆರ್ ಗಣೇಶ್, ಸದಸ್ಯರಾದ ಸಿ.ಎನ್ ವಿಜಯ್, ಡಿ.ಆರ್ ಧನಂಜಯ್, ನಾಗೇಶ್, ಆರ್.ವೆಂಕಟೇಶ್, ಬಿ.ಎಸ್ ಸತೀಶ್ ಆರಾಧ್ಯ, ಶಾಲೆಯ ಮುಖ್ಯ ಶಿಕ್ಷಕರಾದ ನಟರಾಜ್, ಶಿಕ್ಷಕರಾದ ಸ್ವಾಮಿ, ಮೂರ್ತಿ, ಚಂದ್ರಶೇಖರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಾದೇಶ್, ಸದಸ್ಯರಾದ ಲಕ್ಷ್ಮಿ, ಶಾಂತ, ಆಶಾ, ನಾಗರಾಜ್, ದಿವಾಕರ್, ಹರೀಶ್, ಗಣೇಶ್, ರವಿ ಮುಖಂಡರಾದ ಸುರೇಶ್, ಶಿವರಾಜ್, ಸುರೇಂದ್ರ, ರಾಮೇಗೌಡ, ನಾಗೇಶ್ ಮತ್ತಿತರಿದ್ದರು.