ಹೊಸೂರು : ದಾನಿಗಳ ನೆರವು ದೊರೆತರೆ ಗ್ರಾಮಾಂತರ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳ ಅಭಿವೃದ್ದಿ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ವಾತವರಣದಲ್ಲಿ ಶಿಕ್ಷಣ ದೊರೆಯಲು ಸಾಧ್ಯವಾಗುತ್ತದೆ ಎಂದು ಮೈಸೂರು ನಿಸರ್ಗ ಲಯನ್ಸ್ ಕಬ್ಲ್ ಅಧ್ಯಕ್ಷ ಮತ್ತು ಟಿ.ನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಉದಯಕುಮಾರ್ ಹೇಳಿದರು ಹೇಳಿದರು.
ಸಾಲಿಗ್ರಾಮ ತಾಲೂಕಿನ ಕುಪ್ಪೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಚಿಕ್ಕಕೊಪ್ಪಲು ಸಿ.ಎಚ್. ದೇವೇಗೌಡ ಸ್ಮಾರಕ ಉಚಿತ ವಾಚನಾಲಯ ಕೇಂದ್ರ ಮತ್ತು ಮೈಸೂರಿನ ನಿಸರ್ಗ ಲಯನ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಸಮವಸ್ತ್ರ, ಶಾಲಾ ಬ್ಯಾಗ್, ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು
ಇತ್ತಿಚ್ಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಪರಿಣಾಮವಾಗಿ ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಪಡೆಯಲು ಸಹಕಾರಿಯಾಗುತ್ತಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಅವಧಿಯಲ್ಲಿ ಸಿಗುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಭವಿಷ್ಯ ರೂಪಿಸಿ ಕೊಳ್ಳಿ ಎಂದರು
ಮುಖ್ಯ ಅತಿಥಿಯಾಗಿದ್ದ ನಿಸರ್ಗ ಲಯನ್ಸ್ ಕ್ಲಬ್ ಅಧ್ಯಕ್ಷ ಕಾರ್ಯದರ್ಶಿ ಚಂದ್ರು ಮಾತನಾಡಿ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲು ಸಿ.ಎಚ್. ದೇವೇಗೌಡ ಸ್ಮಾರಕ ಹೆಸರಿನಲ್ಲಿ ಉಚಿತ ವಾಚನಾಲಯ ಕೇಂದ್ರ ತೆರೆದು ಪ್ರತಿವರ್ಷ ವಿದ್ಯಾರ್ಥಿಗಳಿ ಸವಲತ್ತು ವಿತರಿಸಿ ಅಳಿಲು ಸೇವೆ ಸಲ್ಲಿಸುತ್ತಿರುವ ಮೈಸೂರು ವಿವಿ ಸಂಜೆ ಕಾಲೇಜಿನ ಪ್ರಾಧ್ಯಾಪಕ ಸಿ.ಡಿ.ಪರಶುತಮರಾಮ ಅವರ ಕಾರ್ಯ ನಿಜಕ್ಕು ಶ್ಲಾಘನೀಯ ಎಂದರು
ಈ ಸಂದರ್ಭದಲ್ಲಿ ಮೈಸೂರು ನಗರಪಾಲಿಕೆ ಸದಸ್ಯ ಎಂ.ಕೆ. ಶಂಕರ್ , ಪ್ರಾಧ್ಯಾಪಕ ಪ್ರೊ.ಸಿ.ಡಿ.ಪರಶುರಾಮ, ಮಾದರಿ ರೈತ ಸತ್ಯಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಸಿ. ಟಿ.ಪಾರ್ಥ, ಕೆ. ಆರ್ . ಮಂಜುನಾಥ್, ಗ್ರಾ.ಪಂ.ಮಾಜಿ ಸದಸ್ಯರಾದ ಚಂದ್ರಯ್ಯ, ಯಜಮಾನ ರಾಮಕೃಷ್ಣೇಗೌಡ, ಶಿಕ್ಷಕ ಭಗೀರಥ ಉಪಸ್ಥಿತರಿದ್ದರು.