ಮೈಸೂರು: ನಮ್ಮ ಮೂಲ ನಾಗರಿಕತೆಗೆ, ಸಂಸ್ಕೃತಿ ಹಾಗೂ ಮಾನವ ನಿರ್ಮಿತ ಕಾರ್ಯಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಕೃತಕ ಬುದ್ಧಿಮತ್ತೆ(ಎಐ) ಬಳಕೆಯಾಗಲಿ ಎಂದು ಮಾನಸ ಗಂಗೋತ್ರಿಯ ರಾಜ್ಯಶಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಮುಜಾಪರ್ ಅಸ್ಸಾದಿ ಹೇಳಿದರು.
ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಂಥಾಲಯ ಮತ್ತು ಮಾಹಿತಿ ವಿeನ ಅಧಯನ ವಿಭಾಗ, ಇಂಗ್ಲಿಷ್ ಅಧಯನ ವಿಭಾಗ ಹಾಗೂ ಗಣಕಯಂತ್ರ ವಿಭಾಗದ ಸಹಯೋಗದಲ್ಲಿ ಚಾಟ್ ಜಿಪಿಟಿ ಮತ್ತು ಶೈಕ್ಷಣಿಕ ಬರವಣಿಗೆ ವಿಷಯಾಧಾರಿತವಾಗಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ನಾವು ಇಂದು ವೈeನಿಕ ಕ್ರಾಂತಿಯ ಅವಧಿಯಲ್ಲಿ ಇದ್ದೇವೆ. ಇದು ನಮ್ಮ ನಾಗರಿಕತೆಯ ಮೇಲೆ ಹಾಗೂ ಬದುಕುವ ವಿಧಾನದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಎಐನಂತಹ ತಂತ್ರಜ್ಞಾನ ನಮ್ಮ ಬದುಕನ್ನೇ ಅತಂತ್ರಗೊಳಿಸುವುದರ ಜತೆಗೆ ನಮ್ಮ ಮೂಲ ನಾಗರಿಕತೆಗೂ ಮಾರಕವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಕೃತಕ ಬುದ್ದಿಮತ್ತೆ ನಿರುದ್ಯೋಗ ಸೃಷ್ಟಿಸುತ್ತದೆ ಎನ್ನುವುದು ಸತ್ಯಸಂಗತಿಯಾಗಿದೆ. ಪ್ರತಿಯೊಂದು ತಾಂತ್ರಿಕ ಬೆಳವಣಿಗೆಯಲ್ಲಿ ಅದನ್ನು ನಾವು ಮನಗಾಣಬಹುದಾಗಿದೆ. ಇನ್ನು ಕೃತಕ ಬುದ್ಧಿ ಮತ್ತೆಯನ್ನು ಅಳವಡಿಸಿಕೊಳ್ಳುವುದರಲ್ಲಿ ಕರ್ನಾಟಕ ಪ್ರಾರಂಭದ ಹಂತದಲ್ಲಿ ಇದ್ದು, ಇನ್ನೂ ಅನೇಕ ರಾಜ್ಯಗಳಾದ ಮಧಪ್ರದೇಶ, ಬಿಹಾರದಂತಹ ರಾಜ್ಯಗಳು ಅದರ ಅಳವಡಿಕೆಗೆ ಪೂರಕವಾಗಿಲ್ಲ ಎಂದು ಹೇಳಿದರು.
ಇದು ನಮ್ಮ ರಾಜ್ಯಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಇದರ ಅಳವಡಿಕೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವಂತಿಲ್ಲ. ಆದರೆ, ಅದರ ಬಳಕೆ ಜಾಗತಿಕ ಮಟ್ಟದಲ್ಲಿ ನಮ್ಮ ಮೂಲ ಸಂಸ್ಕೃತಿ ನಾಗರಿಕತೆಯ ಮೇಲೆ ಪರಿಣಾಮ ಬೀರದಂತೆ ಹಾಗೂ ನಮ್ಮನ್ನೇ ನಾವು ಅದರಲ್ಲಿ ಕಳೆದುಕೊಳ್ಳುವ ರಿತಿಯಲ್ಲಿ ಇರಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊ.ಶಾಲಿನಿ ಅರಸ್, ಪ್ರೊ.ಸಪ್ನಾ.ಎಂ.ಎಸ್, ಪ್ರೊ.ಹೆಚ್.ಎಸ್.ನಾಗೇಂದ್ರ ಸ್ವಾಮಿ, ಪ್ರೊ.ಎನ್.ಹರಿನಾರಾಯಣ ಇನ್ನಿತರರು ಉಪಸ್ಥಿತರಿದ್ದರು.