ಮೈಸೂರು: ಇತ್ತೀಚೆಗೆ ನಡೆದ ಚನ್ನ ಪಟ್ಟಣ ವಿಧಾನ ಸಭೆ ಉಪ ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಗೆಲ್ಲುತ್ತಾರೆಂಬ ಬಗ್ಗೆ ಹಲವರು ಬಾಜಿ ಕಟ್ಟುತ್ತಿರುವುದು ಸರಿಯಲ್ಲ, ಜೂಜಾಟದಿಂದ ಜೀವ-ಜೀವನ ಹಾಳು ಮಾಡಿಕೊಳ್ಳಬಾರದೆಂದು ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಜೆ ಡಿ ಎಸ್ ಮುಖಂಡ ರವಿ ಮನವಿ ಮಾಡಿದ್ದಾರೆ.
ಜೂಜಾಟಕ್ಕಿಂತ ನಮ್ಮ ಬದುಕು ದೊಡ್ಡದು. ಅದನ್ನೆಂದು ಜೂಜಾಟದoಥ ಅಕ್ರಮಗಳಿಗೆ ದೂಡಿ ಮುಕ್ಕಾಗಿಸಬೇಡಿ ಎಂದೂ ಕಿವಿ ಮಾತು ಹೇಳಿದ್ದಾರೆ. ನಮ್ಮ ಜೀವ ಮತ್ತು ಜೀವನ ಜೂಜಾಟದ ವಸ್ತುವಲ್ಲ. ಅದನ್ನು ಎಂದೂ ಅದೃಷ್ಟದ ತಕ್ಕಡಿಯಲ್ಲಿ ತೂಗಿ ದುಸ್ಸಾಹಸ ಮಾಡಬೇಡಿ. ಜೂಜಾಡಿ ಉದ್ದಾರವಾದ ಇತಿಹಾಸವೇ ನಮ್ಮಲ್ಲಿಲ್ಲ ಎಂಬುದನ್ನು ಸದಾ ನೆನಪಿಟ್ಟು ಕೊಳ್ಳಬೇಕೆಂದು ತಿಳಿಸಿದ್ದಾರೆ.
ಪ್ರಸ್ತುತ ಜೀವನದ ಜಂಜಾಟದಲ್ಲಿ ನಮ್ಮ ಜೀವ ಬಳಲಿಬೆಂಡಾಗಿ ಹೋಗುತ್ತಿದೆ. ಇದರ ಮಧ್ಯೆ ಜೀವನವನ್ನು ಜೂಜಾಟದಂಥ ಸಮಸ್ಯೆಗಳಿಗೆ ದೂಡಿ ಹಿಂಸಿಸ ಬೇಡಿ ಎಂದೂ ಅವರು ಕೋರಿದ್ದಾರೆ.
ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಇಂತಹ ಅಭ್ಯರ್ಥಿ ಗೆಲ್ಲುತ್ತಾರೆ ಎಂದೂ ತಮ್ಮ ಬದುಕಿಗೆ ಆಸರೆಯಾದ ಮನೆ – ಜಮೀನುಗಳನ್ನು ಪಣಕ್ಕಿಟ್ಟು ತಮ್ಮ ಜೀವನ ಸಾಗಿಸಲು ಸಾಕುವಂತಹ ಪ್ರಾಣಿಗಳನ್ನು ಬಾಜಿ ಕಟ್ಟುವಂತಹ ಪರಿಸ್ಥಿತಿ ಇದೆ. ಉದಾಹರಣೆಗೆ ದನ ಹಸು ಕುರಿ ಕೋಳಿ ಹೀಗೆ ಹಲವಾರು ರೀತಿಯ ಬಾಜಿಗಳನ್ನು ಕಟ್ಟುತ್ತಿದ್ದಾರೆ ಎಂಬ ಸುದ್ದಿಯನ್ನು ನೋಡಿದ್ದೇವೆ ಓದಿದ್ದೇವೆ ಇದರಲ್ಲಿ ಯಾರೇ ಸೋತರು, ಅವರ ಬದುಕು ಸರ್ವನಾಶವಾಗುತ್ತೆ. ಆದ್ದರಿಂದ ಇಂತಹ ಬದುಕು ಹಾಳು ಮಾಡುವ ಬಾಜಿಗಳಿಗೆ ಜನ ಬಲಿಯಾಗಬಾರದೆಂದು ಕಳಕಳಿಯಿಂದ ಬೇಡಿಕೊಂಡಿದ್ದಾರೆ.
ಇಂತಹ ಚುನಾವಣೆಗಳು ಬರುತ್ತವೆ ಹೋಗುತ್ತವೆ ಇದರಲ್ಲಿ ಎಷ್ಟೇ ಜನ ಸ್ಪರ್ಧಿಗಳಿದ್ದರೂ ಗೆಲುವು ಒಬ್ಬನಿಗೆ ಲಭಿಸುವುದು ಅವರು ಅವರ ರಾಜಕೀಯ ಕ್ಷೇತ್ರದಲ್ಲಿ ಬೆಳೆಯಬೇಕು ಹಾಗೂ ಜನರ ಒಡನಾಟದಲ್ಲಿ ಬೆರೆತು ಒಳ್ಳೆಯ ಕೆಲಸಗಳನ್ನು ಮಾಡಲಿ ಎಂದು ಆಶಿಸೋಣ.
ಇತ್ತೀಚಿಗೆ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಮತದಾನ ಮುಗಿದ ನಂತರ ಕಾಂಗ್ರೆಸ್ ಅಭ್ಯರ್ಥಿ ಒಂದು ಹೇಳಿಕೆಯನ್ನು ಕೊಡುತ್ತಾರೆ ಆ ಹೇಳಿಕೆಯು ಸಹ ರಾಜಕಾರಣದ ಒಂದು ಗಿಮಿಕ್ ಆಗಿರುತ್ತದೆ ಎಂಬುದು ನನ್ನ ಭಾವನೆ ಹೇಳಿಕೆಯಿಂದ ತುಂಬಾ ಜನ ಉತ್ತೇಜನಗೊಂಡು ಮಾತಿಗೆ ಮಾತು ಬೆಳೆದು ಬಾಜಿ ಕಟ್ಟುವ ಮಟ್ಟಕ್ಕೆ ತಲುಪಿರುತ್ತದೆ ಇದು ತುಂಬಾ ಅಪಾಯಕಾರಿ.
ಜೀವ -ಜೀವನ ಹಾಳು ಮಾಡುವ ಬಾಜಿಗಳು ಚನ್ನಪಟ್ಟಣ, ರಾಮನಗರ, ಮದ್ದೂರು, ಮಂಡ್ಯ ನಗರದಲ್ಲಿ ಹೆಚ್ಚು ನಡೆಯುತ್ತಿವೆ ಅಂತ ವರದಿಯಾಗುತ್ತಿದೆ. ದೇಶಾದ್ಯಂತ ಬಾಜಿ ಕಟ್ಟುವ ಜನರು ಇದ್ದೇ ಇರುತ್ತಾರೆ ಅದರಲ್ಲೂ ನಮ್ಮ ರೈತಾಪಿ ವರ್ಗ ಯಾವುದೋ ಒಂದು ಸಣ್ಣ ಮಾತಿನ ಚಕಮಕಿಯಲ್ಲಿ ತಾವುಗಳು ನಂಬಿಕೊಂಡು ಬಂದಿರುವಂತಹ ಹೊಲ ಗದ್ದೆ ಜಮೀನು ಕುರಿ ಕೋಳಿ ಹಸುಗಳನ್ನು ಬಾಜಿಯಾಗಿ ಕಟ್ಟುವುದು ತುಂಬಾ ಅಪಾಯಕಾರಿ ಪೊಲೀಸರೂ ಇದರ ಬಗ್ಗೆ ಗಮನ ಹರಿಸಿ, ಬಾಜಿ ಕಟ್ಟುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದ್ದಾರೆ.