Saturday, April 19, 2025
Google search engine

Homeರಾಜ್ಯತಮ್ಮ ವೈಯಕ್ತಿಕ ಸಿಟ್ಟನ್ನು ಕನ್ನಡಿಗರ ಮೇಲೆ ತೀರಿಸಿಕೊಳ್ಳಬೇಡಿ : ಪ್ರಿಯಾಂಕ್ ಖರ್ಗೆ ಕಿಡಿ

ತಮ್ಮ ವೈಯಕ್ತಿಕ ಸಿಟ್ಟನ್ನು ಕನ್ನಡಿಗರ ಮೇಲೆ ತೀರಿಸಿಕೊಳ್ಳಬೇಡಿ : ಪ್ರಿಯಾಂಕ್ ಖರ್ಗೆ ಕಿಡಿ

ಬೆಂಗಳೂರು : ಕೇಂದ್ರ ಸರ್ಕಾರದಿಂದ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ತೆರಿಗೆ ತಾರತಮ್ಯ ವಿಚಾರವಾಗಿ ಬೆಂಗಳೂರಿನಲ್ಲಿ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ತಮ್ಮ ವೈಯಕ್ತಿಕ ಸಿಟ್ಟನ್ನು ಕಕನ್ನಡಿಗರ ಮೇಲೆ ತೀರಿಸಿಕೊಳ್ಳಬೇಡಿ ಎಂದು ವಾಗ್ದಾಳಿ ನಡೆಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ವಿಚಾರ ಬೆಂಗಳೂರಿನಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ನೀಡಿದ್ದು, ನಾವು ಕಟ್ಟುವ ತೆರಿಗೆಗೆ ಸೂಕ್ತವಾಗಿ ಮರುಪಾವತಿ ಮಾಡಿ ಅನ್ನುತ್ತಿದ್ದೇವೆ. ಉತ್ತರ ಪ್ರದೇಶ 100 ರೂಪಾಯಿ ತೆರಿಗೆ ಪಾವತಿ ಮಾಡಿ 300 ರೂಪಾಯಿ ಪಡೆಯುತ್ತಿದೆ. ಮಧ್ಯಪ್ರದೇಶ 100 ರೂಪಾಯಿ ತೆರಿಗೆ ಪಾವತಿಸಿ 290 ರೂಪಾಯಿ ಪಡೆಯುತ್ತಿದೆ. ಬಿಹಾರ 100 ರೂಪಾಯಿ ತೆರಿಗೆ ಪಾವತಿಸಿ 918 ರೂಪಾಯಿ ಪಡೆಯುತ್ತಿದೆ. ಆದರೆ ನಮ್ಮ ರಾಜ್ಯ 100 ರೂಪಾಯಿ ಪಾವತಿಸಿದರೆ 13 ರೂಪಾಯಿ ಅಷ್ಟೇ ಸಿಗುತ್ತಿದೆ.

ತೆರಿಗೆ ತಾರತಮ್ಯ ಬಗ್ಗೆ ಹಣಕಾಸು ಆಯೋಗಕ್ಕೂ ಮನವಿ ಮಾಡಿದ್ದೇವೆ. ತಮ್ಮ ವೈಯಕ್ತಿಕ ಸಿಟ್ಟನ್ನು ಕನ್ನಡಿಗರ ಮೇಲೆ ತೀರಿಸಿಕೊಳ್ಳಬೇಡಿ ತೆರಿಗೆ ವಿಚಾರದ ಬಗ್ಗೆ ನಮ್ಮ ಹೋರಾಟ ಮುಂದುವರೆಸುತ್ತೇವೆ. ಕನ್ನಡಿಗರ ಪರವಾಗಿ ಸಂಸದರು ಧ್ವನಿ ಎತ್ತುತ್ತಿಲ್ಲ ದಕ್ಷಿಣ ಭಾರತ ಆರ್ಥಿಕ ಕೊಡುಗೆಯಲ್ಲಿ ನಾವು ಹೊಂದಿದ್ದೇವೆ. ತೆರಿಗೆ ಮೂಲಕ ಕೇಂದ್ರ ಸರಕಾರ ವೇಷ ತೀರಿಸಿಕೊಳ್ಳುತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದರು.

RELATED ARTICLES
- Advertisment -
Google search engine

Most Popular