ಮಂಡ್ಯ: ದರ್ಶನ್ ಎಲ್ಲಿದ್ದರೂ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಕಾವೇರಿ ಹೋರಾಟದಲ್ಲಿ ನಿರಂತರವಾಗಿ ಇರ್ತಾರೆ. ಒಳ್ಳೆಯ ಗುಣ ಇರುವ ವ್ಯಕ್ತಿ ದರ್ಶನ್. ಅವರ ಬಗ್ಗೆ ಯಾರು ಸಹ ಕೆಟ್ಟದಾಗಿ ಮಾತನಾಡಬೇಡಿ ಎಂದು ನಟ ಜೋಗಿ ಪ್ರೇಮ್ ಹೇಳಿದ್ದಾರೆ.
ಇಂದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾವೇರಿ ಅಂದ್ರೆ ಸದಾ ಅವರು ಮುಂದೆ ಇರುತ್ತಾರೆ. ಅದರಲ್ಲೂ ಮಂಡ್ಯ ವಿಷಯ ಅಂದ್ರೆ ನಮ್ಮೆಲ್ಲರಿಗೂ ಹೋರಾಟ ಮಾಡಲು ಹೇಳುವ ವ್ಯಕ್ತಿ. ದರ್ಶನ್ ಅವರ ಬಗ್ಗೆ ಯಾರು ಸುಮ್ಮನೆ ಮಾತನಾಡಬಾರದು ಎಂದರು.