ಅವಲಕ್ಕಿ ದೀರ್ಘಕಾಲ ಹಸಿವಾಗದಂತೆ ತಡೆಯುತ್ತದೆ. ಹೊಟ್ಟೆ ತುಂಬಿಸಿಡುತ್ತದೆ. ಪದೇ ಪದೇ ತಿನ್ನುವ ಬಯಕೆ ತಪ್ಪಿಸುತ್ತದೆ. ಅವಲಕ್ಕಿಯು ಶಕ್ತಿ ಮತ್ತು ಅಗತ್ಯ ಪೋಷಕಾಂಶ ಒದಗಿಸುತ್ತದೆ. ಅವಲಕ್ಕಿ ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ.
ಅವಲಕ್ಕಿ ಖಾದ್ಯವನ್ನು ತುಂಬಾ ಜನರು ಇಷ್ಟಪಟ್ಟು ತಿನ್ನುತ್ತಾರೆ. ಅವಲಕ್ಕಿ ಮಾಡುವುದು ತುಂಬಾ ಸುಲಭ. 15 ನಿಮಿಷಗಳಲ್ಲಿ ಬೆಳಗಿನ ತಿಂಡಿಗೆ ಅವಲಕ್ಕಿ ಖಾದ್ಯ ಮಾಡಬಹುದು. ಅವಲಕ್ಕಿ ಬೆಳಗಿನ ತಿಂಡಿಗೆ ಸೂಕ್ತ ಉಪಹಾರವಾಗಿದೆ.
ಅವಲಕ್ಕಿ ದೀರ್ಘಕಾಲ ಹಸಿವಾಗದಂತೆ ತಡೆಯುತ್ತದೆ. ಹೊಟ್ಟೆ ತುಂಬಿಸಿಡುತ್ತದೆ. ಪದೇ ಪದೇ ತಿನ್ನುವ ಬಯಕೆ ತಪ್ಪಿಸುತ್ತದೆ. ಅವಲಕ್ಕಿಯು ಶಕ್ತಿ ಮತ್ತು ಅಗತ್ಯ ಪೋಷಕಾಂಶ ಒದಗಿಸುತ್ತದೆ. ಅವಲಕ್ಕಿ ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ.
ಅವಲಕ್ಕಿಯು ಕಾರ್ಬೋಹೈಡ್ರೇಟ್ ನಲ್ಲಿ ಸಮೃದ್ಧವಾಗಿದೆ. ಗೋಧಿ ಉತ್ಪನ್ನ ಸೇವನೆಯ ಅಲರ್ಜಿ ಇರುವವರು ಅವಲಕ್ಕಿ ಸೇವಿಸುವುದು ಉತ್ತಮ. ಇದು ಅಕ್ಕಿ ಆಧಾರಿತ ಖಾದ್ಯ. ಹಸಿವನ್ನು ತಡೆಯುತ್ತದೆ. ಸುಲಭವಾಗಿ ಜೀರ್ಣವಾಗುತ್ತದೆ.
ನೀವು ಒಂದೇ ರೀತಿಯಲ್ಲಿ ಅವಲಕ್ಕಿ ಖಾದ್ಯ ಮಾಡಿ ಬೋರ್ ಆಗಿದ್ರೆ, ಇಂದು ನಾವು ಅವಲಕ್ಕಿ ಚಿಲ್ಲಾ ಖಾದ್ಯ ಮಾಡುವುದು ಹೇಗೆ ಅಂತಾ ನೋಡೋಣ. ಅವಲಕ್ಕಿಯ ವಿಭಿನ್ನ ರುಚಿ ಪಡೆಯಲು ಅವಲಕ್ಕಿ ಚಿಲ್ಲಾ ತಯಾರಿಸುವುದು ಹೇಗೆ ನೋಡೋಣ.
ಅವಲಕ್ಕಿ ಚಿಲ್ಲಾ ಮಾಡಲು ಬೇಕಾಗುವ ಸಾಮಾಗ್ರಿಗಳು ಹೀಗಿವೆ. ಅವಲಕ್ಕಿ, ರವೆ ಹಿಟ್ಟು, ಓಟ್ಸ್ ಪುಡಿ, ತುರಿದ ಕ್ಯಾರೆಟ್, ಸಣ್ಣದಾಗಿ ಕೊಚ್ಚಿದ ಈರುಳ್ಳಿ, ಸಣ್ಣದಾಗಿ ಕೊಚ್ಚಿದ ಟೊಮೆಟೊ, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕತ್ತರಿಸಿದ ಹಸಿರು ಮೆಣಸಿನಕಾಯಿ, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಉಪ್ಪು, ದೇಸಿ ತುಪ್ಪ ಬೇಕು.
ಅವಲಕ್ಕಿ ಚಿಲ್ಲಾ ಮಾಡಲು ಮೊದಲು ಅವಲಕ್ಕಿ ತೊಳೆದು, ಹತ್ತು ನಿಮಿಷ ನೆನೆಸಿಡಿ. ನಂತರ ಚೆನ್ನಾಗಿ ಮ್ಯಾಶ್ ಮಾಡಿ. ಅದಕ್ಕೆ ಕಡಲೆಬೇಳೆ ಹಿಟ್ಟು ಮತ್ತು ಓಟ್ಸ್ ಪುಡಿ, ಕ್ಯಾರೆಟ್, ಈರುಳ್ಳಿ, ಟೊಮ್ಯಾಟೊ, ಹಸಿರು ಕೊತ್ತಂಬರಿ ಮತ್ತು ಮೆಣಸಿನಕಾಯಿ, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಉಪ್ಪು, ನೀರು ಹಾಕಿ ತೆಳುವಾದ ಸ್ಥಿರತೆ ಮಾಡಿ.
ಈಗ ನಾನ್ ಸ್ಟಿಕ್ ಪ್ಯಾನ್ ಮೇಲೆ ತುಪ್ಪ ಹಾಕಿ. ಅದರ ಮೇಲೆ ಮೂರು ಚಮಚ ಅವಲಕ್ಕಿ ಮಿಶ್ರಣ ಹಾಕಿ, ದುಂಡನೆ ಆಕಾರದಲ್ಲಿ ಹರಡಿ, ಚಿಲ್ಲಾ ಮಾಡಿ. ಎರಡೂ ಬದಿಯನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ತಟ್ಟೆಗೆ ಸರ್ವ್ ಮಾಡಿ, ಚಟ್ನಿಯೊಂದಿಗೆ ಸವಿಯಿರಿ.