ಮಂಡ್ಯ: ನಾಡಿನೇಲ್ಲೆಡೆ ಸಂಕ್ರಾಂತಿ ಸಂಭ್ರಮ ಹಿನ್ನಲೆ ಮೈತ್ರಿಯಾದ ಬಳಿಕ ಬಿಜೆಪಿ-ಜೆಡಿಎಸ್ ದೋಸ್ತಿಗಳಿಂದ ಗೋಮಾತಾ ಪೂಜೆ ನೆರವೇರಿಸಲಾಯಿತು.
ಮಂಡ್ಯದ ಕಾವೇರಿ ನಗರ, ದ್ವಾರಕನಗರ, ಹಾಗೂ ಶ್ರೀರಾಮನಗರದ ನಿವಾಸಿಗಳಿಂದ ಬಿಜೆಪಿ ಮುಖಂಡ ಅಶೋಕ್ ನೇತೃತ್ವದಲ್ಲಿ ಕಾವೇರಿ ನಗರದಲ್ಲಿ 4ನೇ ವರ್ಷದ ಗೋ-ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗೋ-ಪೂಜೆಯಲ್ಲಿ ಬಿಜೆಪಿ-ಜೆಡಿಎಸ್ ಪರಾಜಿತ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಬಿಜೆಪಿ ಪರಾಜಿತ ಅಭ್ಯರ್ಥಿ ಅಶೋಕ್ ಜಯರಾಮ್, ಹಾಗೂ ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಸಾಂಪ್ರದಾಯಿಕವಾಗಿ ಗೋ-ಪೂಜೆ ನೆರವೇರಿಸಿ ರಾಶಿ ಪೂಜೆ ಸಲ್ಲಿಸಿದರು.
ಜನರು ಕೂಡ ಗೋ ಪೂಜೆಯಲ್ಲಿ ಪಾಲ್ಗೊಂಡು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ಬಳಿಕ ಎಳ್ಳು-ಬೆಲ್ಲ ಹಾಗೂ ಪೊಂಗಲ್ ವಿತರಿಸಲಾಯಿತು.

ನಮ್ಮ ಸಂಸ್ಕೃತಿ, ಆಚಾರ,ವಿಚಾರಗಳನ್ನ ನಾವು ಮುಂದುವರಿಸಿಕೊಂಡು ಹೋಗಬೇಕು. ಸಂಕ್ರಾಂತಿಯಂದು ವಿಶೇಷವಾಗಿ ಗೋ ಮಾತೆಗೆ ಪೂಜೆ ಸಲ್ಲಿಸಲಾಗಿದೆ. ಎಲ್ಲರೂ ಕೂಡ 4ನೇ ವರ್ಷದ ಪೂಜೆ ನೆರೆವೇರಿಸಿದ್ದೇವೆ. ವಿಶೇಷವಾಗಿ ಈ ವರ್ಷ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗ್ತಿದೆ. ಹೆಚ್ಚಿನ ಧಾರ್ಮಿಕ ಭಾವನೆಗಳನ್ನು ಜನರಲ್ಲೆ ಕಾಣ್ತಿದ್ದೇವೆ. ಪ್ರತಿ ಮನೆ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ, ರಾಮನ ಆರಾಧನೆ ಹೆಚ್ಚು ನಡೆಯುತ್ತಿದೆ. ನಮ್ಮ ಸಂಸ್ಕೃತಿಯ ಉಳಿಸುವ ನಿಟ್ಟಿನಲ್ಲಿ ಈ ಆಚರಣೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಸಿದ್ದರಾಮಯ್ಯ, ಜೆಡಿಎಸ್ ಮುಖಂಡ ರಾಮಚಂದ್ರು, ಸೇರಿದಂತೆ ಹಲವರು ಭಾಗಿಯಾಗಿದ್ದರು.
